ನವದೆಹಲಿ, ನ.13 (DaijiworldNews/AA): ಮೈಕ್ರೋಸಾಫ್ಟ್ ಸೇವೆಯಲ್ಲಿ ಇದ್ದಕ್ಕಿದ್ದಂತೆ ವ್ಯತ್ಯಯ ಉಂಟಾಗಿದ್ದು, ಇದರಿಂದಾಗಿ ಭಾರತ ಸೇರಿ 74 ದೇಶಗಳು ಸಮಸ್ಯೆ ಅನುಭವಿಸಿದೆ.

ನ.12ರ ಮಧ್ಯರಾತ್ರಿಯಿಂದ ಆರಂಭವಾಗಿರುವ ಮೈಕ್ರೋಸಾಫ್ಟ್ ಸಿಸ್ಟಮ್ ವೈಫಲ್ಯದಿಂದಾಗಿ ಭಾರತ ಸೇರಿದಂತೆ 74 ದೇಶಗಳಲ್ಲಿ ಸಮಸ್ಯೆ ಉಂಟಾಗಿದೆ. ಇದು ಸರ್ವರ್ಗಳ ಮೇಲಿನ ಮಿತಿಮೀರಿದ ಒತ್ತಡ ಹಾಗೂ ಸಂರಚನೆ ದೋಷದಿಂದ ಈ ಸಮಸ್ಯೆ ಉಂಟಾಗಿದೆ. ಇದರಿಂದ ಸರ್ವರ್ಗಳು ತಾವಾಗಿಯೇ ಸ್ಥಗಿತಗೊಂಡಿವೆ. ಈ ಸಮಸ್ಯೆಗೆ ಪರಿಹಾರ ಹುಡುಕಲು ಇನ್ನೂ 48 ಗಂಟೆ ಆಗಬಹುದು ಎಂದು ಕಂಪನಿಯು ತಿಳಿಸಿದೆ.
ಇಂಟರ್ನೆಟ್ ಹಾಗೂ ಯಾವುದೇ ಆನ್ಲೈನ್ ಸೇವೆ ಲಭ್ಯವಾಗ್ತಿಲ್ಲ. ಮೈಕ್ರೋಸಾಫ್ಟ್ ಔಟ್ಲುಕ್, ಮೈಕ್ರೋಸಾಫ್ಟ್ ಟೀಮ್ಸ್, ಮೈಕ್ರೋಸಾಫ್ಟ್ 365, ಶೇರ್ಪಾಯಿಂಟ್, ಕೋಪೈಲಟ್ ಸೇವೆಗಳಲ್ಲಿ ಜಗತ್ತಿನಾದ್ಯಂತ ಭಾರಿ ಸಮಸ್ಯೆ ಉಲ್ಬಣವಾಗಿದೆ. ಇ-ಮೇಲ್, ಮೀಟಿಂಗ್ ಆ್ಯಪ್ಗಳು, ವಿಮಾನ ಸೇವೆಗಳು ಸೇರಿದಂತೆ ಹಲವು ಸೇವೆಗಳು ಸ್ಥಗಿತಗೊಂಡಿವೆ.