ಬೆಂಗಳೂರು, ನ.14 (DaijiworldNews/AA): ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡಬಾರದು. ಕರ್ನಾಟಕ ದೇಶದಲ್ಲೇ ಅತಿ ಹೆಚ್ಚು ತೆರಿಗೆ ಪಾವತಿಸುವ ರಾಜ್ಯಗಳಲ್ಲಿ ಒಂದಾಗಿದ್ದು, ರಾಜ್ಯಕ್ಕೆ ಹೆಚ್ಚಿನ ಅನುದಾನ ನೀಡಬೇಕು ಎಂದು ಪ್ರಧಾನಿ ಬಳಿ ಮನವಿ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.

ಪ್ರಧಾನಿ ಮೋದಿ ಅವರೇ ಖರೀದಿಸಿದ ಮೆಟ್ರೋ ಸ್ಮಾರ್ಟ್ ಕಾರ್ಡ್ ನವೆಂಬರ್ 13ರಂದು ಪ್ರಧಾನಿ ಮೋದಿ ಬೆಂಗಳೂರಿನ ನಮ್ಮ ಮೆಟ್ರೋ ಪಿಂಕ್ ಲೈನ್ ಉದ್ಘಾಟಿಸಿ ಮೆಟ್ರೋದಲ್ಲಿ ಪ್ರಯಾಣಿಸಿದ್ದರು. ಈ ವೇಳೆ ಸಿಎಂ ಡಿ.ಕೆ.ಶಿ ಕೂಡ ಪ್ರಧಾನಿಯವರೊಂದಿಗೆ ಪ್ರಯಾಣಿಸಿದ್ದರು. ಈ ಭೇಟಿಯ ಕುರಿತು ಮಾತನಾಡಿದ ಡಿಕೆಶಿ, "ಮೆಟ್ರೋ ಟಿಕೆಟ್ ಖರೀದಿಸುವ ಸಂದರ್ಭದಲ್ಲಿ ತಮ್ಮ ಬಳಿ ಹಣ ಇರಲಿಲ್ಲ. ಹಾಗಾಗಿ ನನ್ನ ಟಿಕೆಟ್ ಕೂಡ ನೀವೇ ತೆಗೆದುಕೊಳ್ಳಿ ಎಂದು ಪ್ರಧಾನಿಯವರಿಗೆ ಹೇಳಿದ್ದೆ" ಎಂದು ಹೇಳಿದ್ದಾರೆ.
"ಅಭಿವೃದ್ಧಿ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಾಗಿ ಕೆಲಸ ಮಾಡಬೇಕು. ಚುನಾವಣೆ ಬಂದಾಗ ರಾಜಕೀಯ ಬೇರೆ. ಆದರೆ ಸಾರ್ವಜನಿಕರ ಸೇವೆ ಮಾಡುವುದು ನಮ್ಮ ಕರ್ತವ್ಯ. ಬೆಂಗಳೂರು ಮೆಟ್ರೋವನ್ನು ಮುಂದಿನ ದಿನಗಳಲ್ಲಿ 500 ಕಿಲೋಮೀಟರ್ವರೆಗೆ ವಿಸ್ತರಿಸುವ ಗುರಿಯನ್ನೂ ಕೇಂದ್ರದ ಮುಂದೆ ಪ್ರಸ್ತಾಪಿಸಿದ್ದೇನೆ" ಎಂದು ಮಾಹಿತಿ ನೀಡಿದರು.
"50:50 ಅನುದಾನ ಇದ್ದರೂ ರಾಜ್ಯದ ಮೇಲೆಯೇ ಹೆಚ್ಚಿನ ಹೊರೆ? ಮೆಟ್ರೋ ಯೋಜನೆಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಲಾ ಶೇ.50ರಷ್ಟು ಅನುದಾನ ನೀಡುವ ವ್ಯವಸ್ಥೆ ಇದೆ. ಆದರೆ ವಾಸ್ತವದಲ್ಲಿ ಕರ್ನಾಟಕ ಸರ್ಕಾರದ ಮೇಲೆಯೇ ಹೆಚ್ಚಿನ ಆರ್ಥಿಕ ಹೊರೆ ಬೀಳುತ್ತಿದೆ" ಎಂದರು.
"ಭೂಸ್ವಾಧೀನ, ವಿದ್ಯುತ್ ಮತ್ತು ನೀರಿನ ಮಾರ್ಗಗಳ ಸ್ಥಳಾಂತರ, ರಾಜ್ಯದ ತೆರಿಗೆಗಳು, ವಿದೇಶಿ ಸಾಲ ಮರುಪಾವತಿ ಹಾಗೂ ಯೋಜನಾ ವೆಚ್ಚ ಹೆಚ್ಚಳದ ಹೊಣೆಯನ್ನು ರಾಜ್ಯವೇ ಹೊರಬೇಕಾಗಿದೆ ಎಂದು ಅವರು ಹೇಳಿದ್ದಾರೆ. ಹೀಗಾಗಿ ಮೆಟ್ರೋ ಯೋಜನೆಗಳ ವೆಚ್ಚವನ್ನು ಕೇಂದ್ರ ಮತ್ತು ರಾಜ್ಯಗಳು ನ್ಯಾಯಯುತವಾಗಿ ಹಂಚಿಕೊಳ್ಳಬೇಕು, ಯೋಜನೆಗಳಿಗೆ ಶೀಘ್ರ ಅನುಮತಿ ನೀಡಬೇಕು" ಎಂದು ಕೇಳಿಕೊಂಡಿದ್ದಾರೆ.