ಹೈದರಾಬಾದ್, ನ.14 (DaijiworldNews/AA): 2014ರಲ್ಲಿ ಭಾರತದಲ್ಲಿ ಪ್ರಜಾಪ್ರಭುತ್ವ ನಾಶವಾಯಿತು. ದೇಶದ ಚುನಾವಣಾ ವ್ಯವಸ್ಥೆ ಮತ್ತು ಪ್ರಜಾಪ್ರಭುತ್ವದ ಸಂಸ್ಥೆಗಳು ದುರ್ಬಲವಾಗಿವೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ತಿಳಿಸಿದ್ದಾರೆ.

ಹೈದರಾಬಾದ್ನಲ್ಲಿ ನಡೆದ ಭಾರತ್ ಶೃಂಗಸಭೆ 2026ರಲ್ಲಿ ಮಾತನಾಡಿದ ಅವರು, "ಫ್ಯಾಸಿಸ್ಟ್ ಶಕ್ತಿಗಳು ಜನರ ಮಾತು ಕೇಳುವುದಿಲ್ಲ, ಬದಲಿಗೆ ಕೂಗಾಡುವ ಮೂಲಕ ತಮ್ಮ ಪ್ರಭಾವ ತೋರಿಸುತ್ತವೆ ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ. ಇಂತಹ ಶಕ್ತಿಗಳು ರಾಜಕೀಯ, ಉದ್ಯಮ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿಯೂ ಪ್ರಭಾವಿ ಸ್ಥಾನಗಳನ್ನು ಪಡೆದುಕೊಳ್ಳುತ್ತವೆ ಎಂದು ಹೇಳಿದ್ದಾರೆ. ವ್ಯವಸ್ಥೆಗಳು ದುರ್ಬಲವಾದಾಗ ಇಂತಹ ಶಕ್ತಿಗಳು ಹೆಚ್ಚು ಸಕ್ರಿಯವಾಗುತ್ತವೆ" ಎಂದು ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
"2024ರ ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸಿದ್ದ ಸುಮಾರು 14 ಕೋಟಿ ಜನರನ್ನು ಕೆಲವೇ ತಿಂಗಳ ಅಂತರದಲ್ಲಿ ಮತದಾರರ ಪಟ್ಟಿಯಲ್ಲಿ ಇಲ್ಲದವರು ಅಥವಾ ಮತದಾರರಲ್ಲದವರು ಎಂದು ಪರಿಗಣಿಸಲಾಗಿದೆ" ಎಂದು ಆರೋಪಿಸಿದ್ದಾರೆ.
"ಲೋಕಸಭಾ ಚುನಾವಣೆಯಲ್ಲಿ ಗೆದ್ದಿದ್ದ ವಿರೋಧ ಪಕ್ಷಗಳ ಮೈತ್ರಿಕೂಟ, ಕೇವಲ ಮೂರು ತಿಂಗಳ ನಂತರ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡಿತು. ಈ ಅವಧಿಯಲ್ಲಿ ಸುಮಾರು 70 ಲಕ್ಷ ಹೊಸ ಮತದಾರರು ಸೇರ್ಪಡೆಯಾಗಿದ್ದು, ಅವರೆಲ್ಲರೂ ಬಿಜೆಪಿಗೆ ಮತ ಹಾಕಿದ್ದಾರೆ" ಎಂದು ಹೇಳಿದರು.
"ಅದಾನಿ ಮತ್ತು ಮೋದಿ ನಡುವಿನ ಸಂಬಂಧದ ಬಗ್ಗೆ ಆರೋಪ ಉದ್ಯಮಿ ಗೌತಮ್ ಅದಾನಿ ಮತ್ತು ಪ್ರಧಾನಿ ನರೇಂದ್ರ ಮೋದಿ ನಡುವಿನ ಸಂಬಂಧವನ್ನೂ ರಾಹುಲ್ ಗಾಂಧಿ ಟೀಕಿಸಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಅದಾನಿ ಅವರ ಸಂಪತ್ತು ವೇಗವಾಗಿ ಹೆಚ್ಚಾಗಿದೆ. ರಾಜಕೀಯ ಮತ್ತು ಉದ್ಯಮದ ನಡುವಿನ ಸಂಬಂಧವೇ ಇದಕ್ಕೆ ಕಾರಣ" ಎಂದರು.
"ಅದಾನಿ ಅವರ ಉದ್ಯಮ ಹಿತಾಸಕ್ತಿ ಮತ್ತು ಪ್ರಧಾನಿ ಮೋದಿಯವರ ರಾಜಕೀಯ ನಾಯಕತ್ವದ ನಡುವಿನ ವ್ಯತ್ಯಾಸವೇ ಮಾಯವಾಗಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಕಳೆದ ಒಂದು ದಶಕದಲ್ಲಿ ಬಿಜೆಪಿಯ ಆಸ್ತಿಯೂ 11 ಪಟ್ಟು ಹೆಚ್ಚಾಗಿದೆ" ಎಂದು ಅಭಿಪ್ರಾಯಪಟ್ಟಿದ್ದಾರೆ.
"ಜನರೊಂದಿಗಿನ ನೇರ ಸಂಪರ್ಕವೇ ವಿರೋಧ ಪಕ್ಷದ ಶಕ್ತಿ ವಿರೋಧ ಪಕ್ಷಗಳು ಈ ಹಿಂದೆ ಮಾಧ್ಯಮಗಳು, ಪತ್ರಿಕಾಗೋಷ್ಠಿಗಳು, ಸಂದರ್ಶನಗಳು ಮತ್ತು ಸಾರ್ವಜನಿಕ ಸಭೆಗಳ ಮೂಲಕ ಜನರನ್ನು ತಲುಪಲು ಪ್ರಯತ್ನಿಸುತ್ತಿದ್ದವು. ಆದರೆ ಈ ಮಾರ್ಗಗಳು ನಿರೀಕ್ಷಿತ ಪರಿಣಾಮ ಬೀರಲಿಲ್ಲ" ಎಂದು ನುಡಿದರು.