ವಿರಾಜಪೇಟೆ, ಜ 05 (Daijiworld News/MB) : ವ್ಯಕ್ತಿಯೊಬ್ಬನ ಇಬ್ಬರು ಪತ್ನಿಯರ ನಡುವೆ ನಡೆದ ಜನಳ ಓರ್ವಳ ಹತ್ಯೆಯಲ್ಲಿ ಅಂತ್ಯವಾದ ಘಟನೆ ವಿರಾಜಪೇಟೆಯ ಬಳಂಜಬೆರೆಯಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ವಶಿಕಾ ದೇವಿ (27) ಎಂದು ಗುರುತಿಸಲಾಗಿದೆ. ಆಕೆಯ ಸಹೋದರಿ ಹತ್ಯೆ ಮಾಡಿದ ಆರೋಪಿಯಾಗಿದ್ದು ಪರಾರಿಯಾಗಿದ್ದಾಳೆ.
ಮಡಿಕೇರಿ ಜಿಲ್ಲೆ ವಿರಾಜಪೇಟೆ ತಾಲೂಕಿನ ಬಳಂಜಬೆರೆಯ ಕಾಫಿ ಎಸ್ಟೇಟ್ನಲ್ಲಿ ಕೆಲಸ ಮಾಡುತ್ತಿದ್ದ ಜಾರ್ಖಂಡ್ ಮೂಲದ ದಯಾನಂದ್ ಎಂಬಾತ ಕಳೆದ ಏಳು ವರ್ಷಗಳ ಹಿಂದೆ ಅಶಿಕಾಳನ್ನು ಮದುವೆಯಾಗಿದ್ದು ಈ ಮದುವೆಯಾದ ಕೆಲವೇ ವರ್ಷದಲ್ಲಿ ಆಶಿಕಾಳ ಸಹೋದರಿ ವಶಿಕಾಳನ್ನು ಮದುವೆಯಾಗಿದ್ದ. ಈ ಮೂವರೂ ಒಂದೇ ಮನೆಯಲ್ಲಿ ಇದ್ದರು.
ಕೆಲ ದಿನಗಳಿಂದ ಆಶಿಕಾ ಹಾಗೂ ವಶಿಕಾ ನಡುವೆ ಜನಳವಾಗುತ್ತಿದ್ದು ಶನಿವಾರ ನಡೆದ ಜಗಳ ವಿಪರೀತಕ್ಕೆ ತಿರುಗಿ ಆಶಿಕಾ ತಂಗಿ ವಶಿಕಾಳ ಕುತ್ತಿಗೆಯನ್ನು ಕತ್ತಿಯಿಂದ ಕಡಿದು ಅಲ್ಲಿಂದ ಪರಾರಿಯಾಗಿದ್ದಾಳೆ.
ಈ ಕುರಿತು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.