ತುಮಕೂರು, ನ.15 (DaijiworldNews/AA): ಅಧಿಕಾರ ಶಾಶ್ವತವಲ್ಲ, ಮಾಡಿದ ಕೆಲಸ ಶಾಶ್ವತ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ಅಭಿಪ್ರಾಯಪಟ್ಟಿದ್ದಾರೆ.

ತುಮಕೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, "ತಮ್ಮ 40 ವರ್ಷಗಳ ರಾಜಕೀಯ ಜೀವನದಲ್ಲಿ ಅನೇಕ ಏಳುಬೀಳುಗಳನ್ನು ನೋಡಿದ್ದೇನೆ. 1989ರಲ್ಲಿ ಈ ಜಿಲ್ಲೆಯಿಂದ ಶಾಸಕರಾಗಿ ಆಯ್ಕೆಯಾದಾಗ, ವಿದೇಶದಿಂದ ಓದಿ ಬಂದ ತಮಗೆ ರಾಜಕಾರಣ ಆಗ ಹೊಸತು. ಅಂದಿನಿಂದ ಇಲ್ಲಿಯವರೆಗೂ ಅನೇಕ ಬಾರಿ ಉನ್ನತ ಹುದ್ದೆಗಳು ಹತ್ತಿರ ಬಂದು ತಪ್ಪಿ ಹೋದ ಸಂದರ್ಭಗಳನ್ನೂ ಅನುಭವಿಸಿದ್ದೇನೆ" ಎಂದರು.
"ಆದರೆ ಜನತೆಯ ಆಶೀರ್ವಾದದಿಂದ ಶಾಸಕರಾಗಿ, ಹಲವು ಖಾತೆಗಳನ್ನು ನಿಭಾಯಿಸಿ ಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ಈ ರಾಜ್ಯದ ಉಪಮುಖ್ಯಮಂತ್ರಿಯಾಗಿ ಕೆಲಸ ಮಾಡುವ ಅವಕಾಶವನ್ನು ಜನ ನೀಡಿದ್ದು, ಎರಡನೇ ಬಾರಿಗೆ ಉಪಮುಖ್ಯಮಂತ್ರಿಯಾಗಿರೋದಾಗಿ" ಎಂದು ಹೇಳಿದರು.