ಮುಂಬೈ, ಜ 05 (Daijiworld News/MB) : ಮಹಾರಾಷ್ಟ್ರದ ಶಿವಸೇನಾ- ಎನ್ ಸಿಪಿ- ಕಾಂಗ್ರೆಸ್ ಮೈತ್ರಿ ಸರಕಾರಕ್ಕೆ ಖಾತೆ ಹಂಚಿಕೆಗೆ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅನುಮೋದನೆ ನೀಡಿದ್ದು ಮಹಾರಾಷ್ಟ್ರದ ರಾಜ್ಯಪಾಲರ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಈ ವಿಷಯವನ್ನು ಖಚಿತಪಡಿಸಲಾಗಿದೆ.
ಶರದ್ ಪವಾರ್ ನೇತೃತ್ವದ ಎನ್ ಸಿಪಿ ಪಕ್ಷಕ್ಕೆ ಈ ಖಾತೆ ಹಂಚಿಕೆಯಲ್ಲಿ ಪ್ರಮುಖ ಸ್ಥಾನ ದೊರೆತಿದ್ದು ಉಪಮುಖ್ಯಮಂತ್ರಿ , ಎನ್ ಸಿಪಿ ನಾಯಕ ಅಜಿತ್ ಪವಾರ್ ಗೆ ಹಣಕಾಸು ಮತ್ತು ಯೋಜನಾ ಕಾರ್ಯಲಯ ಖಾತೆ ದೊರೆತಿದೆ. ಎನ್ಸಿಪಿಯನ ಅನಿಲ್ ದೇಶ್ ಮುಖ್ ರಾಜ್ಯದ ಗೃಹ ಸಚಿವ ಸ್ಥಾನ ದೊರೆತಿದೆ ಎಂದು ವರದಿಯಾಗಿದೆ.
ಯುವ ಶಿವಸೇನಾ ನಾಯಕ ಆದಿತ್ಯ ಠಾಕ್ರೆಗೆ ಪರಿಸರ ಮತ್ತು ಪ್ರವಾಸೋದ್ಯಮ ಖಾತೆ ನೀಡಲಾಗಿದ್ದು ಕಾಂಗ್ರೆಸ್ ನಾಯಕ ಬಾಳಾ ಸಾಹೇಬ್ ಥಾರೋಟ್ ಗೆ ಕಂದಾಯ ಖಾತೆ ನೀಡಲಾಗಿದೆ ಎಂದು ವರದಿ ತಿಳಿಸಿದೆ.