ಕೊಪ್ಪಳ, ಜ 05 (Daijiworld News/MB) : ಪೌರತ್ವ ತಿದ್ದುಪಡಿ ಕಾಯ್ದೆ ಮುಖಾಂತರ ನಾವು ನೊಂದವರಿಗೆ ಪೌರತ್ವ ನೀಡುತ್ತೇವೆ ಹೊರತು ಕಿತ್ತುಕೊಳ್ಳುವುದಿಲ್ಲ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಸಿ ಸಿ ಪಾಟೀಲ್ ಹೇಳಿದರು.
ಭಾನುವಾರ ಕೊಪ್ಪಳದಲ್ಲಿ ಮನೆಮನೆಗೆ ಭೇಟಿ ನೀಡಿ ಪೌರತ್ವ ತಿದ್ದುಪಡಿ ಕಾಯ್ದೆ ಪರ ಪ್ರಚಾರ ಮಾಡಿ ಕರಪತ್ರ ನೀಡಿ ಮಾತನಾಡಿದರು, "ಈ ಕಾಯ್ದೆ ಜನತೆಗೆ ಪೌರತ್ವ ನೀಡಲು ಜಾರಿಗೆ ತರಲಾಗಿದೆ. ಆದರೆ ಇದನ್ನು ವಿರೋಧ ಮಾಡಲಾಗುತ್ತಿದೆ. ಆ ನಿಟ್ಟಿನಲ್ಲಿ ನಾವು ಮನೆಮನೆಗೆ ಭೇಟಿ ನೀಡಿ ಜಾಗೃತಿ ಮೂಡಿಸುತ್ತೇವೆ ಎಂದು ಹೇಳಿದರು.
ಮಂಗಳೂರಿನಲ್ಲಿ ನಡೆದ ಗಲಭೆ ಎಲ್ಲರಿಗೂ ತಿಳಿದಿದೆ. ನಾವು ಪ್ರತಿಭಟನೆ ನಡೆಸುವವರಿಗೆ ತಡೆ ನೀಡಿಲ್ಲ. ಬಳ್ಳಾರಿ ಜಿಲ್ಲೆಯಲ್ಲಿ ಸೋಮಶೇಖರ ರೆಡ್ಡಿ ವಿವಾದಾತ್ಮಕ ಹೇಳಿಕೆ ನೀಡಿದ ಬಗ್ಗೆ ನಾನು ನೋಡಿಲ್ಲ. ಯಾರೇ ಆದರೂ ಪ್ರಚೋದನಾತ್ಮಕ ಹೇಳಿಕೆ ನೀಡುವುದು ಸರಿಯಲ್ಲ. ಆ ರೀತಿ ಯಾರೂ ಮಾತಾನಾಡಬಾರದು. ಈ ಕುರಿತು ಪಕ್ಷ ಚರ್ಚೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುತ್ತದೆ ಎಂದು ತಿಳಿಸಿದ್ದಾರೆ.