ಗುಜರಾತ್, ಜ.05 (Daijiworld News/PY) : 3 ವರ್ಷದ ಮಗುವಿನ ಮೇಲೆ ಅತ್ಯಾಚಾರವೆಸಗಿದ ಅತ್ಯಾಚಾರಿಯನ್ನು ಅಹಮದಾಬಾದ್ ಪೊಲೀಸರು ಬಂಧಿಸಿದ್ದಾರೆ.
ಡಿ.28ರಂದು ಮನೆಯ ಬಳಿಯಿಂದ 3 ವರ್ಷದ ಮಗು ಕಾಣೆಯಾಗಿದ್ದು, ನೆರೆಮನೆಯಾತ ಮಗುವಿಗೆ ಆಮೀಷವೊಡ್ಡಿ ಕಿಡ್ನ್ಯಾಪ್ ಮಾಡಿ ಅತ್ಯಾಚಾರವೆಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆಯ ಬಗ್ಗೆ ಮಗುವಿನ ಪೋಷಕರು ಪೊಲೀಸ್ ಠಾಣೆಯನ್ನು ದೂರು ನೀಡಿದ್ದರು.
ಈ ಘಟನೆ ನಡೆದ ಒಂದು ದಿನದ ಬಳಿಕ ಅತ್ಯಾಚಾರವೆಸಗಿದ ನೆರಮನೆಯಾತ ಮಗುವನ್ನು ಮನೆಯ ಸಮೀಪವೇ ಬಿಟ್ಟು ಪರಾರಿಯಾಗಿದ್ದಾನೆ. ಮಗುವಿನ ಮೈಮೇಲಿದ್ದ ಗಾಯಗಳನ್ನು ನೋಡಿದ ಪೋಷಕರು ಮತ್ತೊಮ್ಮೆ ದೂರು ನೀಡಿದ್ದಾರೆ.
ಈ ಘಟನೆಯ ಬಗ್ಗೆ ಆರೋಪಿಯ ಹುಡುಕಾಟ ನಡೆಸಿದ ಅಹಮದಾಬಾದ್ ಪೊಲೀಸರು ಜ.04ರ ಶನಿವಾರದಂದು ಅತ್ಯಾಚಾರವೆಸಗಿದ್ದ ನೆರೆಮನೆಯಾತನನ್ನು ಬಂಧಿಸಿದ್ದ, ವಿಚಾರಣೆಗೊಳಪಡಿಸಿದ್ದಾರೆ.