ನವದೆಹಲಿ, ಜ 05 (Daijiworld News/MB) : ಪಾಕಿಸ್ತಾನದ ನನಕಾನಾ ಸಾಹಿಬ್ ಗುರುದ್ವಾರದ ಮೇಲೆ ದಾಳಿ ನಡೆದಿದೆ, ಆದರೆ ಈಗ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಎಲ್ಲಿ ಓಡಿಹೋಗಿದ್ದಾರೆ ತಿಳಿಯುತ್ತಿಲ್ಲ. ಗುರುದ್ವಾರದ ಮೇಲೆ ದಾಳಿ ನಡೆದ ಬಳಿಕವೂ ಸಿಧು ಅವರು ಐಸಿಸ್ ಮುಖ್ಯಸ್ಥನನ್ನು ತಬ್ಬಿಕೊಳ್ಳುತ್ತಾರೆಯೇ ಎಂದು ಪ್ರಶ್ನೆ ಮಾಡಿದ್ದು ಗುರುದ್ವಾರದ ಮೇಲೆ ನಡೆದ ದಾಳಿಯನ್ನು ತೀವ್ರವಾಗಿ ಖಂಡನೆ ಮಾಡಿದ್ದಾರೆ.
ಶನಿವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, "ಪಾಕಿಸ್ತಾನದಲ್ಲಿ ದಶಕಗಳಿಂದಲ್ಲೂ ಅಲ್ಪಸಂಖ್ಯಾತರ ಮೇಲೆ ಶೋಷಣೆ ನಡೆಯುತ್ತಿದೆ. ಅಲ್ಪಸಂಖ್ಯಾತರ ಮತಾಂತರ ಹಾಗೂ ಅವರ ಮೇಲೆ ಅತ್ಯಾಚಾರ ಮಾಡುವ ಬೆದರಿಕೆಗಳನ್ನು ಹಾಕಲಾಗುತ್ತಿದೆ. ಯುವತಿಯರನ್ನು ಒತ್ತಾಯ ಪೂರ್ವಕವಾಗಿ ಮತಾಂತರ ಮಾಡುವ ಘಟನೆ ನಡೆಯುತ್ತಿದೆ. ಈ ಪ್ರಕ್ರಿಯೆಯಲ್ಲಿ ಪೊಲೀಸರು, ಸರ್ಕಾರ ಹಾಗೂ ಏಜೆನ್ಸಿಳು ಭಾಗಿಯಾಗಿದೆ. ಗುರುದ್ವಾರದ ಮೇಲೆ ನಡೆದ ದಾಳಿ ಅಲ್ಪಸಂಖ್ಯಾತರು ಹೇಗೆ ಕಿರುಕುಳಕ್ಕೆ ಒಳಗಾಗುತ್ತಿದ್ದಾರೆ ಎಂಬುದನ್ನು ತೋರಿಸುತ್ತದೆ" ಎಂದು ದೂರಿದರು.
ಪಾಕಿಸ್ತಾನದಲ್ಲಿ ನಿರಂತರವಾಗಿ ಹಲ್ಲೆ ನಡೆಯುವುದರಿಂದ ಅಲ್ಲಿನ ಅಲ್ಪಸಂಖ್ಯಾತರು ಇಲ್ಲಿಗೆ ಬರುತ್ತಾರೆ. ಹಾಗಾಗಿ ಸಿಎಎ ಕಾಯ್ದೆ ಅಗತ್ಯವಾಗಿದೆ. ಅದನ್ನು ಶೀಘ್ರವೇ ಅನುಷ್ಠಾನ ಮಾಡಬೇಕಿದೆ. ಈಗ ಪಾಕಿಸ್ತಾನವೇ ಸಿಎಎ ಈ ಸಂದರ್ಭದಲ್ಲಿ ಅಗತ್ಯವಾಗಿದೆ ಎಂದು ಸಾಬೀತು ಮಾಡಿದೆ ಎಂದರು.
ಈ ಘಟನೆಯು ಕಾಬಾ ಅಥವಾ ಜೆರುಸಲೆಮ್ ಮೇಲಿನ ದಾಳಿಗೆ ಸಮಾನವಾದದ್ದು. ಈ ಸಂದರ್ಭದಲ್ಲಿ ಸಿಧು ಪಾಜೆ ಎಲ್ಲಿ ಓಡಿ ಹೋಗಿದ್ದಾರೆ ಎಂದು ನನಗೆ ತಿಳಿಯುತ್ತಿಲ್ಲ. ಅವರು ಎಲ್ಲಿದ್ದಾರೆ ಎಂದು ಯಾರಾದರು ಹುಡುಕಿ ಕೊಡಿ ಎಂದು ವ್ಯಂಗ್ಯ ಮಾಡಿದ್ದಾರೆ.