ಬೆಂಗಳೂರು, ನ.18 (DaijiworldNews/AK):ರೈಲ್ವೆ ಕಾಮಗಾರಿ ಹಿನ್ನೆಲೆ ನೈರುತ್ಯ ರೈಲ್ವೆ ವ್ಯಾಪ್ತಿಯಲ್ಲಿ ಸಂಚರಿಸುವ ಹಲವು ಪ್ರಮುಖ ಎಕ್ಸ್ಪ್ರೆಸ್ ರೈಲುಗಳ ಆಗಮನ ಸಮಯವನ್ನು ಬದಲಾವಣೆ ಮಾಡಲಾಗಿದೆ. ಆಯಾ ರೈಲುಗಳ ಮುಂದೆ ನಮೂದಿಸಲಾದ ಪ್ರಯಾಣ ಆರಂಭದ ದಿನಾಂಕದಿಂದ ಈ ನೂತನ ವೇಳಾಪಟ್ಟಿ ಜಾರಿಗೆ ಬರಲಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಯಶವಂತಪುರ–ಹಾಸನ ಮಾರ್ಗದ ರೈಲು:
ಹಾಸನ ನಿಲ್ದಾಣಕ್ಕೆ ಈ ಹಿಂದೆ ರಾತ್ರಿ 21:05 (9:05 PM) ಕ್ಕೆ ಆಗಮಿಸುತ್ತಿದ್ದ ಈ ರೈಲು, ಪರಿಷ್ಕೃತ ವೇಳಾಪಟ್ಟಿಯಂತೆ ರಾತ್ರಿ 21:20 (9:20 PM) ಕ್ಕೆ ತಲುಪಲಿದೆ (ಯಶವಂತಪುರದಿಂದ ಶಾಂತಿಗ್ರಾಮದವರೆಗಿನ ಸಮಯದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ)
ರೈಲು ಸಂಖ್ಯೆ: 16572 ಬೀದರ್–ಯಶವಂತಪುರ ಎಕ್ಸ್ಪ್ರೆಸ್:
ಜಾರಿ ದಿನಾಂಕ : ನವೆಂಬರ್ 23, 2026 ರಿಂದ
ಯಶವಂತಪುರ ಕ್ಕೆ ಹಳೆಯ ಸಮಯ ಬೆಳಗ್ಗೆ 07:40 ಅಗಮಿಸುತ್ತಿತ್ತು. ಇದೀಗ ಬದಲಾವಣೆಯಾದ ಸಮಯ ಬೆಳಗ್ಗೆ 07:55 (ಬೀದರ್–ಯಲಹಂಕ ನಡುವೆ ಸಮಯ ಬದಲಾವಣೆ ಇಲ್ಲ)
ರೈಲು ಸಂಖ್ಯೆ 16528 ಕಣ್ಣೂರು–ಯಶವಂತಪುರ ಡೈಲಿ ಎಕ್ಸ್ಪ್ರೆಸ್:
ಜಾರಿ ದಿನಾಂಕ : ನವೆಂಬರ್ 21, 2026 ರಿಂದ
ಯಶವಂತಪುರ ಆಗಮನ: ಹಳೆಯ ಸಮಯ ಬೆಳಗ್ಗೆ 07:50 . ಬದಲಾವಣೆಯಾದ ಸಮಯ ಬೆಳಗ್ಗೆ 08:05 (ಕಣ್ಣೂರು–ಬಾಣಸವಾಡಿ ನಡುವೆ ಸಮಯ ಬದಲಾವಣೆ ಇಲ್ಲ).
ರೈಲು ಸಂಖ್ಯೆ 16546 ಸಿಂಧನೂರು–ಯಶವಂತಪುರ ಡೈಲಿ ಎಕ್ಸ್ಪ್ರೆಸ್:
ಜಾರಿ ದಿನಾಂಕ: ನವೆಂಬರ್ 21, 2026 ರಿಂದ
ಯಶವಂತಪುರ ಆಗಮನ: ಹಳೆಯ ಸಮಯ ಬೆಳಗ್ಗೆ 08:05 | ಬದಲಾವಣೆಯಾದ ಸಮಯ ಬೆಳಗ್ಗೆ 08:15 (ಸಿಂಧನೂರು–ಚಿಕ್ಕಬಾಣಾವರ ನಡುವೆ ಸಮಯ ಬದಲಾವಣೆ ಇಲ್ಲ)
ರೈಲು ಸಂಖ್ಯೆ 12214 ದೆಹಲಿ ಸರಾಯ್ ರೋಹಿಲ್ಲಾ–ಯಶವಂತಪುರ ವಾರದ ಡುರೊಂಟೊ ಎಕ್ಸ್ಪ್ರೆಸ್:
ಜಾರಿ ದಿನಾಂಕ : ನವೆಂಬರ್ 23, 2026 ರಿಂದ
ಯಶವಂತಪುರ ಆಗಮನ: ಹಳೆಯ ಸಮಯ ಬೆಳಗ್ಗೆ 08:20 | ಬದಲಾವಣೆಯಾದ ಸಮಯ ಬೆಳಗ್ಗೆ 08:25 (ದೆಹಲಿ–ಗುಂತಕಲ್ ನಡುವೆ ಸಮಯ ಬದಲಾವಣೆ ಇಲ್ಲ)
ರೈಲು ಸಂಖ್ಯೆ 16574 ಪಾಂಡಿಚೇರಿ–ಯಶವಂತಪುರ ವಾರದ ಎಕ್ಸ್ಪ್ರೆಸ್:
ಜಾರಿ ದಿನಾಂಕ: ನವೆಂಬರ್ 21, 2026 ರಿಂದ
ಯಶವಂತಪುರ ಆಗಮನ: ಹಳೆಯ ಸಮಯ ಬೆಳಗ್ಗೆ 08:20 | ಬದಲಾವಣೆಯಾದ ಸಮಯ ಬೆಳಗ್ಗೆ 08:25 (ಪಾಂಡಿಚೇರಿ–ಬಾಣಸವಾಡಿ ನಡುವೆ ಸಮಯ ಬದಲಾವಣೆ ಇಲ್ಲ)
ರೈಲು ಸಂಖ್ಯೆ 12735 ಚರ್ಲಪಲ್ಲಿ–ಯಶವಂತಪುರ ಗರೀಬ್ ರಥ್ ಎಕ್ಸ್ಪ್ರೆಸ್:
ಜಾರಿ ದಿನಾಂಕ : ನವೆಂಬರ್ 22, 2026 ರಿಂದ
ಯಶವಂತಪುರ ಆಗಮನ: ಹಳೆಯ ಸಮಯ ಬೆಳಗ್ಗೆ 08:20 | ನೂತನ ಸಮಯ ಬೆಳಗ್ಗೆ 08:25 (ಚರ್ಲಪಲ್ಲಿ–ಹಿಂದೂಪುರ ನಡುವೆ ಸಮಯ ಬದಲಾವಣೆ ಇಲ್ಲ),