ಶಿವಮೊಗ್ಗ, ಜ.05 (Daijiworld News/PY) : "ವೈದ್ಯಕೀಯ ಸಂಸ್ಥೆಯ ನಿರ್ದೇಶಕ ಡಾ. ಲೇಪಾಕ್ಷಿ ನಿರ್ದೇಶಕನ ಹುದ್ದೆಯಲ್ಲಿ ಇರುವವರೆಗೆ ನಾನು ವೈದ್ಯಕೀಯ ಸಂಸ್ಥೆಯ ಯಾವುದೇ ಕಾರ್ಯಕ್ರಮ, ಸಭೆಯಲ್ಲಿ ಭಾಗವಹಿಸುವುದಿಲ್ಲ" ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.
ಜ.05 ಭಾನುವಾರ ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿಗಳ ವೀಕ್ಷಣೆಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೊಂದಿಗೆ ಈಶ್ವರಪ್ಪ ಅವರು ತೆರಳಿ ಪರಿಶೀಲನೆ ನಡೆಸಿದರು. ಈ ಸಂದರ್ಭ ಸಂಸದ ರಾಘವೇಂದ್ರ ಅವರು ಈಶ್ವರಪ್ಪ ಅವರನ್ನು ಫೋನ್ ಮೂಲಕ ನಗರದ ವೈದ್ಯಕೀಯ ಸಂಸ್ಥೆಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಬರುವಂತೆ ಆಹ್ವಾನಿಸಿದ್ದು, ಈ ವೇಳೆ ರಾಘವೇಂದ್ರ ಅವರ ಮಾತಿಗೆ ಪ್ರತಿಕ್ರಿಯಿಸಿದ ಈಶ್ವರಪ್ಪ "ವೈದ್ಯಕೀಯ ಸಂಸ್ಥೆಯ ನಿರ್ದೇಶಕ ಡಾ. ಲೇಪಾಕ್ಷಿ ನಿರ್ದೇಶಕನ ಹುದ್ದೆಯಲ್ಲಿ ಇರುವವರೆಗೆ ನಾನು ವೈದ್ಯಕೀಯ ಸಂಸ್ಥೆಯ ಯಾವುದೇ ಕಾರ್ಯಕ್ರಮ, ಸಭೆಯಲ್ಲಿ ಭಾಗವಹಿಸುವುದಿಲ್ಲ" ಎಂದು ಹೇಳಿದರು.
"ಆತನ ಮುಖ ನೋಡಲೂ ನನಗೆ ಇಷ್ಟ ಇಲ್ಲ, ಆತನನ್ನು ಮೊದಲು ತೆಗೆದು ಹಾಕಿ, ಆ ಬಳಿಕ ನಾನು ನೀನು ಕರೆಯುವ ವೈದ್ಯಕೀಯ ಸಂಸ್ಥೆಯ ಎಲ್ಲಾ ಕಾರ್ಯಕ್ರಮ, ಸಭೆಯಲ್ಲಿ ಪಾಲ್ಗೊಳ್ಳುತ್ತೇನೆ" ಎಂದು ಹೇಳಿದ್ದಾರೆ.