ಬೆಂಗಳೂರು, ಜ 05 (DaijiworldNews/SM): ಯುವತಿಯ ಮೇಲೆ ಅತ್ಯಾಚಾರ ನಡೆಸಿದ ಆರೋಪಿಗಳು ಅದನ್ನು ವೀಡಿಯೋ ಚಿತ್ರೀಕರಣಗೊಳಿಸಿ ಆ ವೀಡಿಯೋಗಳನ್ನು ಬಳಸಿಕೊಂಡು ಯುವತಿಯ ಮತಾಂತರಕ್ಕೆ ಯತ್ನಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದ್ದು, ಈ ಬಗ್ಗೆ ಮುಖ್ಯಮಂತ್ರಿಗಳಿಗೆ ದೂರು ನೀಡಲಾಗಿದೆ.
ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಈ ಬಗ್ಗೆ ಮುಖ್ಯಮಂತ್ರಿಗಳಿಗೆ ದೂರು ಸಲ್ಲಿಸಿದ್ದಾರೆ. ಯುವತಿ ಕೇರಳದ ಕಾಸರಗೋಡಿನ ತಂಗೊಳಿಯವಳು ಎನ್ನಲಾಗಿದೆ. ಈಕೆಯ ಮೇಲೆ ಅನ್ಯ ಧರ್ಮದ ಯುವಕನೊಬ್ಬ ಅತ್ಯಾಚರ ನಡೆಸಿದ್ದ. ಹಾಗೂ ಅತ್ಯಾಚಾರದ ವೀಡಿಯೋ ಮಾಡಿಕೊಂಡು ಆ ವೀಡಿಯೋ ಬಳಸಿಕೊಂಡು ಮತಾಂತರಕ್ಕೆ ಯತ್ನಿಸಿದ್ದ ಎನ್ನಲಾಗಿದೆ. ವೀಡಿಯೋ ವೈರಲ್ ಮಾಡುವುದಾಗಿ ಹೇಳಿ ಬೆದರಿಕೆಯೊಡ್ಡುತ್ತಿದ್ದ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಯುವಕನ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಮುಖ್ಯಮಂತ್ರಿಗಳಿಗೆ ದೂರು ನೀಡಲಾಗಿದೆ.
ಇನ್ನು ಕಾಸರಗೋಡಿನ ಯುವತಿಗೆ ಸ್ನೇಹದ ನೆಪ ಹೇಳಿ ಆಕೆಗೆ ನಿದ್ರೆ ಬರುವ ಔಷಧಿ ಮಿಶ್ರಣದ ಪಾನೀಯ ಕುಡಿಸಿ ಬಳಿಕ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ. ಬಳಿಕ ಸಂತ್ರಸ್ಥೆಯನ್ನು ಮಂಗಳೂರು, ಬೆಂಗಳೂರಿಗೆ ಕರೆತಂದು ಮತ್ತೆ ಮತ್ತೆ ಅತ್ಯಾಚಾರ ನಡೆಸಲಾಗಿದೆ ಎನ್ನಲಾಗಿದೆ. ಅಲ್ಲದೆ ಆಕೆಯ ಮೇಲೆರಗಿದ ಕಾಮುಕರು ತಮ್ಮ ಕೃತ್ಯವನ್ನು ವೀಡಿಯೋ ಚಿತ್ರೀಕರಣ ಮಾಡಿದ್ದಾನೆ. ಈ ವೀಡಿಯೋ ಬಳಸಿಕೊಂಡು ಆಕೆಯನ್ನು ಮತಾಂತರವಾಗುವಂತೆ ಒತ್ತಾಯಿಸುತ್ತಿದ್ದ ಎನ್ನಲಾಗಿದೆ.