ನವದೆಹಲಿ, ಜ 05 (DaijiworldNews/SM): ಪ್ರತಿಭಟನೆಯಿಂದಲೇ ದೇಶದೆಲ್ಲೆಡೆ ಸುದ್ದಿಯಾಗಿರುವ ರಾಷ್ಟ್ರ ರಾಜ್ಯಧಾನಿಯಲ್ಲಿರುವ ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಮತ್ತೆ ಹಿಂಸಾಚಾರ ನಡೆದಿದೆ. ಮಾಸ್ಕ್ ಧರಿಸಿ ಪ್ರತಿಭಟನಾ ಸ್ಥಳಕ್ಕೆ ಮುನ್ನುಗ್ಗಿದ ಗುಂಪೊಂದು ವಿದ್ಯಾರ್ಥಿ ಸಂಘದ ಅಧ್ಯಕ್ಷ ಹಾಗೂ ಉಪನ್ಯಾಸಕರ ಮೇಲೆ ಹಲ್ಲೆ ಮನಬಂದಂತೆ ಹಲ್ಲೆ ನಡೆಸಿದೆ ಎಂದು ತಿಳಿದುಬಂದಿದೆ.
ಘಟನೆಯಲ್ಲಿ ಉಪನ್ಯಾಸಕರು, ವಿದ್ಯಾರ್ಥಿ ಸಂಘದ ನಾಯಕ ಸೇರಿದಂತೆ ಹಲವು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ರವಿವಾರ ಸಂಜೆಯಾಗುತ್ತಿದ್ದಂತೆ ಮುಖ ಮುಚ್ಚಿಕೊಂಡು ವಿವಿಯ ಹಾಸ್ಟೆಲ್ ನೊಳಗೆ ಎಂಟ್ರಿಕೊಟ್ಟ ಐವತ್ತಕ್ಕೂ ಅಧಿಕ ಮಂದಿಯ ತಂಡ ಹಾಸ್ಟೆಲ್ ನ ಕೊಣೆಗಳಿಗೆ ತೆರಳಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದೆ. ಹಾಗೂ ಹಾಸ್ಟೆಲ್ ನಲ್ಲಿದ್ದ ವಸ್ತುಗಳನ್ನು ಪುಡಿಗೈದಿದೆ. ಮುಖ ಮುಚ್ಚಿಕೊಂಡ ಗುಂಪು ನನ್ನ ಮೇಲೆ ಹಲ್ಲೆ ಮಾಡಿತು. ಮನ ಬಂದಂತೆ ಥಳಿಸಿದ್ದು, ರಕ್ತ ಸುರಿಯುತ್ತಿದೆ ಎಂದು ವಿದ್ಯಾರ್ಥಿ ಸಂಘಟನೆ ಅಧ್ಯಕ್ಷೆ ಐಷೆ ಘೋಷ್ ತಿಳಿಸಿದ್ದಾರೆ.
ಇನ್ನು ಜೆಎನ್ಯು ಗಲಭೆ ಮಾಹಿತಿ ತಿಳಿಯುತ್ತಿದ್ದಂತೆ ಅಲ್ಲಿಗೆ 7 ಆಂಬುಲೆನ್ಸ್ಗಳನ್ನು ಕಳುಹಿಸಲಾಗಿದೆ. ಹಾಗೂ ವಿವಿ ಸುತ್ತ ಅಲ್ಲದೆ ಹೆಚ್ಚವರಿ ಪೊಲೀಸರನ್ನು ನಿಯೋಜಿಸಿ ಭದ್ರತಾ ಕ್ರಮಕೈಗೊಳ್ಳಲಾಗಿದೆ.