ನವದೆಹಲಿ, ಜ 6 (Daijiworld News/MB) : ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಭಾನುವಾರ ಹಿಂಸಾಚಾರ ನಡೆದಿದ್ದು ಮಾಸ್ಕ್ ಧರಿಸಿದ್ದ ದುಷ್ಕರ್ಮಿಗಳ ಗುಂಪು ಜೆಎನ್ ಯು ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಸೇರಿದಂತೆ ಹಲವು ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರ ಮೇಲೆ ದಾಳಿ ಮಾಡಿ ವಿಶ್ವವಿದ್ಯಾನಿಲಯದ ಆಸ್ತಿಪಾಸ್ತಿಗೆ ಹಾನಿ ಮಾಡಿದ್ದಾರೆ.
ಈ ಹಿಂಸಾಚಾರವನ್ನು ವಿರೋಧ ಪಕ್ಷ ಹಾಗೂ ನಟನಟಿಯರು ತೀವ್ರವಾಗಿ ಖಂಡನೆ ಮಾಡಿದ್ದು, " ಈ ದಾಂದಳೆಯನ್ನು ಅಮಿತ್ ಶಾ ಹಾಗೂ ಪ್ರಧಾನಿ ಮೋದಿಯವರ ಗೂಂಡಾಗಳು ಮಾಡಿದ್ದು ವಿಶ್ವವಿದ್ಯಾನಿಲಯದಲ್ಲಿ ಭಯವನ್ನು ಹರಡುತ್ತಿದ್ದಾರೆ" ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಆರೋಪ ಮಾಡಿದ್ದಾರೆ.
ಹಿಂಸೆಯನ್ನು ಮಾಡಿ ಈಗ ಬಿಜೆಪಿಯವರು ನಮ್ಮವರು ಹಿಂಸೆ ಮಾಡಿಲ್ಲ ಎಂದು ನಾಟಕವಾಡುತ್ತಿದ್ದಾರೆ, ಜನರು ಮೋಸ ಹೋಗುವುದಿಲ್ಲ ಎಂದು ಹೇಳಿದ್ದಾರೆ.
ಮುಂಬೈನ ಗೇಟ್ ವೇ ಮುಂಭಾಗ ನೆರೆದಿರುವ ಸಹಸ್ರಾರು ವಿದ್ಯಾರ್ಥಿಗಳು ಜೆಎನ್ ಯು ಹಿಂಸಾಚಾರ ಖಂಡಿಸಿ ಮಧ್ಯರಾತ್ರಿಯಿಂದಲೂ ಪ್ರತಿಭಟನೆ ನಡೆಸುತ್ತಿದ್ದಾರೆ. ಗೂಂಡಾಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹ ಮಾಡಿದ್ದಾರೆ.
"ಇದು ಮೋದಿ ಸರ್ಕಾರ ವಿದ್ಯಾರ್ಥಿಗಳು , ಯುವಕರ ಮೇಲೆ ಸೇಡು ತೀರಿಸುವ ರೀತಿಯೇ?"ಎಂದು ಸುರ್ಜಿವಾಲಾ ಪ್ರಶ್ನಿಸಿದ್ದಾರೆ.
ಮಾಸ್ಕ್ ಹಾಖಿದ ದುಷ್ಕರ್ಮಿಗಳು ಸುಮಾರು 2 ಗಂಟೆಗಳಿಗೂ ಅಧಿಕ ಕಾಲ ನಡೆದಿದ್ದು ಈ ಹಿಂಸಾಚಾರದಲ್ಲಿ ವಿದ್ಯಾರ್ಥಿ ಸಂಘಟನೆ ಅಧ್ಯಕ್ಷೆ ಐಷೆ ಘೋಷ್ ಸೇರಿದಂತೆ ಸುಮಾರು 28 ಮಂದಿ ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.