ಬೆಂಗಳೂರು, ಜ.06 (Daijiworld News/PY) : ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತರುವ ಕೇಂದ್ರ ಸರ್ಕಾರದ ನಿರ್ಧಾರದ ಪರ ವಿರೋಧಗಳು ಕೇಳಿಬರುತ್ತಿವೆ.
ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಅನುಷ್ಠಾನಗೊಳಿಸುವ ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ದ ದೇಶದಾತ್ಯಂತ ಪ್ರತಿಭಟನೆ ನಡೆಸುತ್ತಿದ್ದಾರೆ.
ಸಿಎಎ ಜಾರಿಗೆ ತರಲು ಕೇಂದ್ರ ಸರ್ಕಾರ ತೆಗೆದುಕೊಂಡ ನಿರ್ಧಾರವನ್ನು ವಿದೇಶದಲ್ಲಿ ನೆಲೆಸಿರುವ ಭಾರತೀಯರು ಬೆಂಬಲಿಸಿದ್ದು, ಕೇಂದ್ರ ಸರ್ಕಾರದ ಈ ನಿಲುವನ್ನು ಸ್ವಾಗತಿಸಿದ್ದಾರೆ.
ಸ್ವೀಡನ್ ದೇಶದ ಸ್ಕೋಕ್ ಹೊಂನಲ್ಲಿ ಸಭೆ ಸೇರಿದ ಭಾರತೀಯರು, ಪ್ರಧಾನಿ ಮೋದಿ ಸರ್ಕಾರ ಜಾರಿಗೆ ತರಲು ನಿರ್ಧರಿಸಿದ ಪೌರತ್ವ ತಿದ್ದುಪಡಿ ಕಾಯ್ದೆಗೆ ಬೆಂಬಲ ನೀಡಿದ್ದು, ಇದರಿಂದ ಅಕ್ರಮ ವಲಸಿಗರು ದೇಶದಿಂದ ಹೊರ ಹೋಗುತ್ತಾರೆ ಇದೊಂದು ಒಳ್ಳೆಯ ತಿದ್ದುಪಡಿಯಾಗಿದೆ. ಪ್ರಧಾನಿ ಮೋದಿಯವರ ಈ ನಿಲುವಿಗೆ ನಮ್ಮ ಬೆಂಬವಿದೆ ಎಂದು ಸಿಎಎಯ ಬ್ಯಾನರ್ಗಳನ್ನು ಹಿಡಿದು ಕೇಂದ್ರ ಸರ್ಕಾರಕ್ಕೆ ಬೆಂಬಲ ಸೂಚಿಸಿದ್ದಾರೆ.