ಗುವಾಹಟಿ, ಜ 6 (Daijiworld News/MB) : ಮಳೆ ಬಂದು ಒದ್ದೆಯಾಗಿದ್ದ ಪಿಚ್ ಒಣಗಿಸಲು ಭಾನುವಾರ ಬಾರಾಬತಿ ಕ್ರೀಡಾಂಗಣದಲ್ಲಿ ಸಿಬ್ಬಂದಿಗಳು ಇಸ್ತ್ರಿ ಪೆಟ್ಟಿಗೆ ಮತ್ತು ಹೇರ್ ಡ್ರೈಯರ್ ಬಳಸಿದ್ದು ಇದು ಟೀಕೆಗೆ ಒಳಗಾಗಿದ್ದು ಮಾತ್ರವಲ್ಲದೆ ಟ್ರೋಲ್ ಮಾಡಿದ ತರಾಟೆಗೆ ತೆಗೆದುಕೊಳ್ಳಲಾಗಿದೆ.
ಭಾರತ ಹಾಗೂ ಶ್ರೀಲಂಕಾ ನಡುವಿನ ಮೂರು ಪಂದ್ಯಗಳ ಮೊದಲನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದು ಪಂದ್ಯ ಆರಂಭವಾಗಲಿರುವಾಗ ಮಳೆ ಸುರಿದಿದ್ದು ಪಿಚ್ ಒದ್ದೆಯಾದ ಕಾರಣದಿಂದಾಗಿ ಪಂದ್ಯವನ್ನು ರದ್ದು ಮಾಡಲಾಗಿತ್ತು.
ಆದರೆ ಮಳೆಯಿಂದ ಒದ್ದೆಯಾದ ಪಿಚ್ನ್ನು ಒಣಗಿಸಲು ಸಿಬ್ಬಂದಿಗಳು ಇಸ್ತ್ರಿ ಪೆಟ್ಟಿಗೆ ಮತ್ತು ಹೇರ್ ಡ್ರೈಯರ್ ಬಳಸಿದ್ದು ಜನರು ಇದನ್ನು ಕಟುವಾಗಿ ಟೀಕೆ ಮಾಡಿದ್ದಾರೆ.
ವಿಶ್ವದ ಶ್ರೀಮಂತ ಕ್ರಿಕೆಟ್ ಸಂಸ್ಥೆಯಾಗಿರುವ ಬಿಸಿಸಿಐ ಪಿಚ್ ಒಣಗಿಸಲು ಬೇರೆ ತಂತ್ರಜ್ಞಾನದ ಸಹಾಯ ಪಡೆದು ಪಿಚ್ ಒಣಗಿಸಬಹುದಿತ್ತು ಆದರೆ ಈ ರೀತಿ ಪಂದ್ಯ ರದ್ದು ಮಾಡಿದ್ದು ಎಷ್ಟು ಸರಿ? ಇನ್ನು ಪಿಚ್ ಒಣಗಿಸಲು ಇಸ್ತ್ರಿ ಪೆಟ್ಟಿಗೆ ಮತ್ತು ಹೇರ್ ಡ್ರೈಯರ್ ಬಳಸಲಾಗಿದೆ ವಾಟ್ ಎ ಶೇಮ್ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಾಗೆಯೇ ನಾವು ಹೇರ್ ಡ್ರೈಯರ್ ಮತ್ತು ಇಸ್ತ್ರಿ ಪೆಟ್ಟಿಗೆಯನ್ನು ಕಳುಹಿಸಬೇಕು ಎಂದು ನಿರ್ಧಾರ ಮಾಡಿದ್ದೇವೆ. ಇವುಗಳನ್ನು ತಲುಪಿಸಲು ಯಾರ ಸಂಪರ್ಕ ಮಾಡಬೇಕು ಎಂದು ಅಸ್ಸಾಂ ಸರ್ಕಾರ ಹಾಗೂ ಬಿಸಿಸಿಐಯನ್ನು ಪ್ರಶ್ನಿಸಿ ಟ್ರೋಲ್ ಮಾಡಲಾಗಿದೆ.
ಆದರೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಸಮಸ್ಯೆ ಎದುರಾಗುವುದಿಲ್ಲ. ಸುಮಾರು 4.5 ಕೋಟಿ ರೂ. ವೆಚ್ಚದಲ್ಲಿ ಸಬ್ ಏರ್ ಸಿಸ್ಟಂ ಅನ್ನು ಕ್ರೀಡಾಂಗಣದಲ್ಲಿ ಅಳವಡಿಕೆ ಮಾಡಲಾಗಿದ್ದು ಮಳೆ ನಿಂತ ಕೆಲವೇ ಬಿಸಿ ಗಾಳಿಯನ್ನು ಹಾಯಿಸಿ ಮೈದಾನವನ್ನು ಒಣಗಿಸುವ ವ್ಯವಸ್ಥೆ ಮಾಡಲಾಗಿದ್ದು ಕೆಲವೇ ನಿಮಿಷಗಳಲ್ಲಿ ಪಂದ್ಯವನ್ನು ಆರಂಭ ಮಾಡಬಹುದು.