ನವದೆಹಲಿ, ಜ 06 (Daijiworld News/MSP): ಸುಪ್ರೀಂಕೋರ್ಟ್ ನಲ್ಲಿ ಸೋಮವಾರದಿಂದ ಶಬರಿಮಲೆ ವಿವಾದ, ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು , ಪೌರತ್ವ ತಿದ್ದುಪಡಿ ಕಾಯ್ದೆ ಸೇರಿದಂತೆ ಹಲವು ಮಹತ್ವದ ಪ್ರಕರಣಗಳ ವಿಚಾರಣೆ ನಡೆಯಲಿದೆ.
ಚಳಿಗಾಲದ ರಜೆಯ ಬಳಿಕ ಸೋಮವಾರದಿಂದ ಸುಪ್ರೀಂಕೋರ್ಟ್ ಪುನರಾರಂಭವಾಗಲಿದ್ದು, ಹಲವು ಮಹತ್ವದ ಪ್ರಕರಣಗಳ ವಿಚಾರಣೆ ನಡೆಯಲಿದೆ. ಕಲಾಪದ ಒದಲ ದಿನ ಟಾಟಾ ಸೈನ್ಸ್ ಕಂಪನಿ ಹಾಗೂ ಸೈರಸ್ ಮಿಸ್ತ್ರಿ ನಡುವಿನ ವ್ಯಾಜ್ಯದ ವಿಚಾರಣೆ ನಡೆಯುವ ಸಾಧ್ಯತೆ ಇದೆ.
ಶಬರಿ ಮಲೆ ವಿವಾದ ಸಂಬಂಧ ವಿಚಾರಣೆಯನ್ನು ಏಳು ಸದಸ್ಯರ ಸಾಂವಿಧಾನಿಕ ಪೀಠ ನಡೆಸಲಿದೆ. ಜೊತೆಗೆ ಜಮ್ಮುಕಾಶ್ಮೀರ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದು ಪ್ರಕರಣಗಳ ವಿಚಾರಣೆಗಳುಜ.22 ರಿಂದ ಸಿಜೆಐ ಎಸ್.ಎ ಬೋಬ್ಡೆ ನೇತೃತ್ವದಲ್ಲಿ ನಡೆಯಲಿವೆ.