ಗುವಾಹಟಿ, ಜ.06 (Daijiworld News/PY) : ಅಸ್ಸಾಂನ ಪೊಲೀಸ್ ವರಿಷ್ಠಾಧಿಕಾರಿಯೊಬ್ಬರು ಪಾರ್ಟಿಯ ವೇಳೆ ಸಹೋದ್ಯೋಗಿಯ 13 ವರ್ಷದ ಮಗಳಿಗೆ ಕಿರುಕುಳ ನೀಡಿದ್ದ ಆರೋಪದ ಹಿನ್ನೆಲೆ ಐಪಿಎಸ್ ಅಧಿಕಾರಿಯ ಮೇಲೆ ಪೋಕ್ಸೋ ಕಾಯ್ದೆಯಡಿ ದೂರು ದಾಖಲಾಗಿದೆ ಎಂದು ತಿಳಿದುಬಂದಿದೆ.
ಡಿ.31ರಂದು ನಡೆದ ಪಾರ್ಟಿಯ ವೇಳೆ ಸಹೋದ್ಯೋಗಿಯ 13 ವರ್ಷದ ಮಗಳಿಗೆ ಅಸ್ಸಾಂನ ಪೊಲೀಸ್ ವರಿಷ್ಠಾಧಿಕಾರಿಯೊಬ್ಬರು ಕಿರುಕುಳ ನೀಡುತ್ತಿದ್ದು, ಈ ಆರೋಪದ ಹಿನ್ನೆಲೆ ಪೊಲೀಸ್ ವರಿಷ್ಠಾಧಿಕಾರಿಯ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಸಂತ್ರಸ್ತೆಯ ತಾಯಿ ನೀಡಿದ ದೂರಿನ ಆಧಾರದ ಮೇಲೆ ಜನವರಿ 3 ರಂದು ಗುವಾಹಟಿಯಲ್ಲಿ ಐಪಿಎಸ್ ಅಧಿಕಾರಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಕಚೇರಿ ತಿಳಿಸಿದೆ.
“ಐಪಿಎಸ್ ಅಧಿಕಾರಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಕಾನೂನು ಇದೆ ಹಾಗೂ ಕಾನೂನಿನ ಪ್ರಕಾರ ಎಲ್ಲವೂ ಮುಂದುವರಿಯುತ್ತದೆ” ಎಂದು ಅಸ್ಸಾಂ ಡಿಜಿಪಿ ಬಿ ಜೆ ಮಹಂತಾ ತಿಳಿಸಿದ್ದಾರೆ.