ನವದೆಹಲಿ, ಜ 6 (Daijiworld News/MB) : ಆಂಬ್ಯುಲೆನ್ಸ್ನಲ್ಲಿ 460 ಮದ್ಯದ ಬಾಟಲ್ಗಳನ್ನು ಕಳ್ಳ ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧನ ಮಾಡಿದ್ದಾರೆ.
ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಯಲ್ಲಿ ರೋಗಿಗಳನ್ನು ಸಾಗಿಸಲು ಬಳಸುವ ಆಂಬ್ಯುಲೆನ್ಸ್ ಇದಾಗಿದ್ದು ಚಾಲಕ ಅನಿಲ್ ಅನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೋನೆಪತ್ ನಿವಾಸಿಯೊಬ್ಬರು ಜಿಲ್ಲೆಯಿಂದ ನೋಯ್ಡಾಗೆ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದಾರೆ ಎಂದು ಪೊಲೀಸರಿಗೆ ಮಾಹಿತಿ ದೊರೆದಿದ್ದು ಈ ಮಾಹಿತಿಯ ಆಧಾರದಲ್ಲಿ ಪೊಲೀಸರು ಅಕ್ರಮ ಮದ್ಯಸಾಗಾಟವನ್ನು ತಡೆಹಿಡಿದಿದ್ದಾರೆ.
ಅಕ್ರಮ ಮದ್ಯ ಸಾಗಾಟ ನಡೆಸಲಾಗುತ್ತಿದೆ ಎಂಬ ಖಚಿತ ಮಾಹಿತಿ ದೊರೆತ ಹಿನ್ನಲೆಯಲ್ಲಿ ಪೊಲೀಸರು ಚೆಕ್ಪಾಯಿಂಟ್ ಸ್ಥಾಪನೆ ಮಾಡಿದ್ದು ಆಂಬ್ಯುಲೆನ್ಸ್ ಆ ಪ್ರದೇಶದ ಮೂಲಕ ಹಾದು ಹೋಗುವುದನ್ನು ಗಮನಿಸಿದ ಪೊಲೀಸ್ ಸಿಬ್ಬಂದಿ ಚಾಲಕನನ್ನು ನಿಲ್ಲಿಸುವಂತೆ ಸೂಚಿಸಿದ್ದಾರೆ, ಆದರೆ ಚಾಲಕ ವಾಹನವನ್ನು ಚೆಕ್ಪಾಯಿಂಟ್ಗೆ ಮುಂಚಿತವಾಗಿ ನಿಲ್ಲಿಸಿ ಅಲ್ಲಿಂದ ಓಡಿ ಹೋಗಿ ತಪ್ಪಿಸಲು ಯತ್ನ ಮಾಡಿದ್ದಾನೆ ಎಂದು ಪಾಲ್ವಾಲ್ ಪೊಲೀಸರು ಪ್ರೊ ಮಂಜೀತ್ ಕುಮಾರ್ ತಿಳಿಸಿದ್ದಾರೆ.
ಆರೋಪಿ ಓಡಿದಾಗ ಪೊಲೀಸರು ಆತನನ್ನು ಬೆನ್ನಟ್ಟಿ ಬಂಧನ ಮಾಡಿದ್ದು ವಾಹನವನ್ನು ಪರಿಶೀಲಿಸಿದಾಗ, 460 ಬಾಟಲ್ ವಿದೇಶಿ ಮದ್ಯಗಳು ಕಂಡುಬಂದಿವೆ. ಆದರೆ ಚಾಲಕನಲ್ಲಿ ಯಾವುದೇ ಪರವಾನಗಿ ಇರಲಿಲ್ಲ ಎಂದು ಹೇಳಿದ್ದಾರೆ.
ಆರೋಪಿ ಅನಿಲ್ ಆಂಬ್ಯುಲೆನ್ಸ್ ನ ಚಾಲಕನಾಗಿದ್ದು, ಆಂಬ್ಯುಲೆನ್ಸ್ ನಲ್ಲಿ ಹರಿಯಾಣದ ನಂಬರ್ ಪ್ಲೇಟ್ ಇದೆ. ಆರೋಪಿಯು ಈ ಮೊದಲು ಈ ರೀತಿ ಅಕ್ರಮ ಸಾಗಾಟ ನಡೆಸಿದ್ದಾನೆ. ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ವಾಹನ ಮತ್ತು ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಈ ಪ್ರಕರಣದ ತನಿಖಾಧಿಕಾರಿ ಹೆಡ್ ಕಾನ್ಸ್ಟೆಬಲ್ ಜಿತೇಂದರ್ ತಿಳಿಸಿದ್ದಾರೆ.
ಅದೇ ಮಾರ್ಗದಲ್ಲಿ ಶನಿವಾರ ನಡೆದ ಮತ್ತೊಂದು ಪ್ರಕರಣದಲ್ಲಿ ಪೊಲೀಸರು ಕುರುಕ್ಷೇತ್ರದಿಂದ ಆಗ್ರಾಗೆ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಟ್ರಕ್ನಿಂದ 1,000 ಪೆಟ್ಟಿಗೆಗಳ ಅಕ್ರಮ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.