ಬೆಂಗಳೂರು, ಜ 06 (Daijiworld News/MSP): ಜೆಎನ್ ಯು ಕ್ಯಾಂಪಸ್ ನೊಳಗೆ ಮುಸುಕುಧಾರಿಗಳ ತಂಡವು ನುಗ್ಗಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ ಘಟನೆಯ ಬಗ್ಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಟ್ವೀಟ್ ಮಾಡಿದ್ದಾರೆ.
ಬೇರೆ ವಿಶ್ವವಿದ್ಯಾಲಯದಲ್ಲಿ ಜರುಗದ ವಿವಾದ ಜೆಎನ್ ಯು ಕ್ಯಾಂಪಸ್ ನಲ್ಲಿ ಮಾತ್ರ ಯಾಕೆ ನಡೆಯುತ್ತದೆ ಎಂದು ಪ್ರಶ್ನಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಸುರೇಶ್ ಕುಮಾರ್ " ದೇಶದಲ್ಲಿ ಸುಮಾರು 790 ವಿಶ್ವವಿದ್ಯಾಲಯಗಳಿವೆ. ಬೇರೆ ಯಾವ ವಿಶ್ವವಿದ್ಯಾಲಯದಲ್ಲೂ ಜರುಗದ ವಿವಾದ, ವಿದ್ಯಮಾನ ಜೆ ಎನ್ ಯು ನಲ್ಲಿ ಮಾತ್ರ ಏಕೆ ಜರುಗುತ್ತಿದೆ? ಜೆ ಎನ್ ಯು ಗಿರುವ ವಿಶೇಷ ಸ್ಥಾನ-ಮಾನ ಅಲ್ಲಿರುವ ಪಠ್ಯೇತರ ಚಟುವಟಿಕೆಗಳಿಗಾಗಿಯೇ? ಎಲ್ಲ ವಿಶ್ವವಿದ್ಯಾಲಯಗಳೂ ಸಮಾನ, ಜೆಎನ್ಯು ಹೆಚ್ಚು ಸಮಾನ ಎಂಬುದು ಇಂದಿನ ಅನಿಮಲ್ ಫಾರ್ಮ್ ನೀತಿ ಎಂದು ಟ್ವೀಟ್ ಮಾಡಿದ್ದಾರೆ.
ಸುರೇಶ್ ಕುಮಾರ್ ಅವರ ಟ್ವೀಟ್ಗೆ ಹಲವಾರು ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಕೆಲವರು ಶಿಕ್ಷಣ ಸಚಿವರ ಪರ ವಾದಿಸಿದ್ರೆ ಇನ್ನು ಕೆಲವರು ವಿರೋಧವಾಗಿ ಟ್ವೀಟ್ ಮಾಡಿ ಸಚಿವರ ಕಾಲೆಳೆದಿದ್ದಾರೆ.