ಪುಲ್ವಾಮ, ಜ 7 (Daijiworld News/MB) : ಭಾರತೀಯ ಸೇನಾಪಡೆ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿನ ಅವಂತಿಪೊರಾದಲ್ಲಿ ಎನ್ಕೌಂಟರ್ ನಡೆಸಿ ಓರ್ವ ಉಗ್ರನನ್ನು ಹತ್ಯೆ ಮಾಡಿದೆ.
ಉಗ್ರರು ಅವಂತಿಪೋರಾದಲ್ಲಿ ಅಡಗಿರುವ ಬಗ್ಗೆ ಖಚಿತ ಮಾಹಿತಿ ದೊರೆತ ಹಿನ್ನಲೆಯಲ್ಲಿ ಸೇನಾಪಡೆ ಕಾರ್ಯಚರಣೆ ನಡೆಸಿದ್ದು ಈ ಕಾರ್ಯಾಚರಣೆ ವೇಲೆ ಎನ್ಕೌಂಟರ್ನಲ್ಲಿ ಓರ್ವ ಉಗ್ರರನ್ನು ಹೊಡೆದುರುಳಿಸಿದೆ.
ಸೇನಾಪಡೆ ಹತ್ಯೆಯಾದ ಉಗ್ರನಿಂದ ಶಸ್ತ್ರಾಸ್ತ್ರಗಳು ಹಾಗೂ ಸ್ಫೋಟಕ ವಸ್ತುಗಳನ್ನು ವಶಪಡೆಸಿಕೊಂಡಿದ್ದು ಕಾರ್ಯಾಚರಣೆಯನ್ನು ಮುಂದುವರೆಸಿದೆ ಎಂದು ವರದಿಯಾಗಿದೆ.