ಕಲಬುರ್ಗಿ, ಜ 7(Daijiworld News/MSP): ಕೇಂದ್ರ ತನ್ನ ಮೊಂಡು ಹಠವನ್ನು ಬದಿಗಿರಿಸಿ ವಿದ್ಯಾರ್ಥಿಗಳ ಮಾತನ್ನು ತಾಳ್ಮೆಯಿಂದ ಆಲಿಸಲಿ. ಆದ್ರೆ ಕೇಂದ್ರ ತನ್ನ ಹಠಕ್ಕೆ ಬಿದ್ದು ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯವನ್ನು ಹತ್ತಿಕ್ಕಲು ಹೊರಟರೆ ಮುಂದೆ ಒಂದು ವಿಶ್ವವಿದ್ಯಾಲಯವಲ್ಲ ನೂರು ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಸಿಡಿದೇಳುತ್ತಾರೆ ಎಂದು ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ಹೇಳಿದ್ದಾರೆ.
ಕಲಬುರ್ಗಿಯ ಪತ್ರಿಕಾಭವನದಲ್ಲಿ ಪತ್ರಕರ್ತರ ಜತೆ ಮಾತನಾಡಿದ ಸಸಿಕಾಂತ್ ಸೆಂಥಿಲ್, ಪೌರತ್ವ ತಿದ್ದುಪಡಿ ಕಾಯ್ದೆ, ರಾಷ್ಟ್ರೀಯ ಪೌರತ್ವ ನೋಂದಣಿ ವಿರೋಧಿಸಿ ನಾಗರೀಕರೇ ಸ್ವಯಂ ಪ್ರೇರಿತರಾಗಿ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಪ್ರತಿಭಟನೆಗಳಿಂದ ಕೇಂದ್ರ ಸರ್ಕಾರಕ್ಕೆ ಮುಖಭಂಗವಾಗಿದ್ದು ಹತಾಶವಾದ ಕೇಂದ್ರ ಸರ್ಕಾರ ಬುಲೆಟ್ ಮೂಲಕ ತಡೆಯಲು ಪ್ರತಿಭಟನಕಾರರನ್ನು ತಡೆಯಲು ಹೊರಟಿದೆ. ಇದು ಅತ್ಯಂತ ಅಪಾಯಕಾರಿಯಾಗಿದ್ದು ಇದರ ವಿರುದ್ಧ ಎಲ್ಲರೂ ಹೋರಾಟ ನಡೆಸಬೇಕಿದೆ ಎಂದರು.
ಇದೇ ವೇಳೆ ತಮಗೆ ರಾಜಕೀಯ ಪ್ರವೇಶದ ಯಾವುದೇ ಆಸಕ್ತಿ ಇಲ್ಲ ಎಂದು ಸ್ಪಷ್ಟಪಡಿಸಿದ ಸೆಂಥಿಲ್, ದೇಶದಲ್ಲಿ ಆರ್ಥಿಕ ಹಿಂಜರಿತ, ನಿರುದ್ಯೋಗದ ಸಮಸ್ಯೆ ತುಂಬಿರುವಾಗ ಸಿಎಎ, ಎನ್ಪಿಆರ್ ಅಗತ್ಯವಿದೆಯೇ ಎಂದು ಪ್ರಶ್ನಿಸಿದರು.