ನವದೆಹಲಿ, ಜ 8 (Daijiworld News/MB) : ನಿರ್ಭಯಾ ಅತ್ಯಾಚಾರ ಪ್ರಕರಣದ ನಾಲ್ವರು ಅಪರಾಧಿಗಳನ್ನು ಜನವರಿ 22ರಂದು ಗಲ್ಲಿಗೇರಿಸಲು ದೆಹಲಿಯ ಪಟಿಯಾಲ ಕೋರ್ಟ್ ಡೆತ್ ವಾರೆಂಟ್ ಜಾರಿ ಮಾಡಿದ್ದು ನಿರ್ಭಯಾ ತಾಯಿ ಇದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.
ಕಳೆದ ಏಳು ವರ್ಷಗಳಿಂದ ಮಗಳ ಅತ್ಯಾಚಾರ ಪ್ರಕರಣದ ನ್ಯಾಯಕ್ಕಾಗಿ ಕಾಯುತ್ತಿದ್ದೆವು. ಈಗ ನ್ಯಾಯಾಲಯ ನ್ಯಾಯ ನೀಡಿದೆ. ಈ ತೀರ್ಪು ದೇಶದ ಮಹಿಳೆಯರಿಗೆ ಕಾನೂನಿನ ಮೇಲೆ ಇರುವ ನಂಬಿಕೆ, ಗೌರವವನ್ನು ಹೆಚ್ಚಿಸಿದೆ ಎಂದು ನಿರ್ಭಯಾ ತಾಯಿ ತಿಳಿಸಿದ್ದಾರೆ.
ಈ ಪ್ರಕರಣದ ಆರೋಪಿಗಳಾದ ಆರು ಜನರನ್ನು ಬಂಧನ ಮಾಡಲಾಗಿತ್ತು. ಆ ಪೈಕಿ ಓರ್ವ ಅಪ್ರಾಪ್ತನಾಗಿದ್ದು ಮೂರು ವರ್ಷಗಳು ಸೆರೆವಾಸ ಅನುಭವಿಸಿ ಆ ನಂತರ ಬಿಡುಗಡೆಯಾಗಿದ್ದಾನೆ. ಇನ್ನೋರ್ವ ತಿಹಾರ್ ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವಿಚಾರಣಾ ನ್ಯಾಯಾಲಯ ೨೦೧೩ ರ ಸೆಪ್ಟೆಂಬರ್ನಲ್ಲಿ ಉಳಿದ ನಾಲ್ವರಿಗೆ ಮರಣದಂಡನೆ ವಿಧಿಸಿತು. ಅಪರಾಧಿಗಳು ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕಾರ ಮಾಡಿತ್ತು. ಇದೀಗ ಡೆತ್ ವಾರೆಂಟ್ ಜಾರಿ ಮಾಡಿದೆ.