ಬೆಂಗಳೂರು, ಜ.08 (Daijiworld News/PY) : "ಕೇಂದ್ರ ಸರ್ಕಾರ ನೆರೆಪರಿಹಾರಕ್ಕೆ ಮಾಡಿರುವ ನೆರೆಪರಿಹಾರದ ಮೊತ್ತ ಸಾಲದು. ನೆರೆ ಪರಿಹಾರಕ್ಕೆ ಇದುವರೆಗೆ ಎರಡು ಕಂತುಗಳಲ್ಲಿ ಹಣ ಬಿಡುಗಡೆ ಮಾಡಲಾಗಿದ್ದು, ಹೆಚ್ಚಿನ ಪರಿಹಾರ ಸಿಗುವ ಭರವಸೆಯಿದೆ" ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಬಿಎಸ್ವೈ ಅವರು, "ಪ್ರಧಾನಿ ಮೋದಿ ರಾಜ್ಯಕ್ಕೆ ಬಂದು ಹಿಂತಿರುಗಿದ ತಕ್ಷಣವೇ 1869 ಕೋಟಿ. ರೂಗಳ ಪರಿಹಾರವನ್ನು ಘೋಷಿಸಿದ್ದಾರೆ. ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರವು ಹಂತ ಹಂತವಾಗಿ ಹೆಚ್ಚಿನ ಆರ್ಥಿಕ ನೆರವು ನೀಡಲಿದೆ. ಮೊದಲಿಗೆ 12000 ಕೋಟಿ ರೂ ಬಿಡುಗಡೆಯಾಗಿತ್ತು, ಈಗ 1869 ಕೋಟಿ ರೂ ಪರಿಹಾರ ಬಿಡುಗಡೆ ಮಾಡಿದ್ದಾರೆ. ಈ ವಿಷಯವಾಗಿ ನಾನು ಪ್ರಧಾನಿ ಮೋದಿ ಅವರನ್ನು ಶ್ಲಾಘಿಸುತ್ತೇನೆ" ಎಂದರು.
ಇತ್ತೀಚೆಗೆ ನೆರೆ ಪರಿಹಾರಕ್ಕಾಗಿ ಬಿಡುಗಡೆ ಮಾಡಿರುವ ಹಣ ಸಾಕಾಗುವುದಿಲ್ಲ, ಹೆಚ್ಚಿನ ಹಣದ ಅನಿವಾರ್ಯತೆ ಇದೆ. ನೆರೆ ಪರಿಹಾರಕ್ಕೆ ಕೇಂದ್ರದಿಂದ ಮತ್ತಷ್ಟು ಆರ್ಥಿಕ ನೆರವು ಬೇಗನೇ ಸಿಗಲಿದೆ. ಬಜೆಟ್ನ ಪೂರ್ವಭಾವಿ ಸಭೆ ಪ್ರಾರಂಭಿಸಲಾಗಿದ್ದು, ಉತ್ತಮ ಬಜೆಟ್ ಮಂಡನೆ ಮಾಡುವುದಾಗಿ ತಿಳಿಸಿದರು.