ನವದೆಹಲಿ, ಜ 08 (Daijiworld News/MSP): ಇರಾನ್ ಜನರಲ್ ಕಮಾಂಡರ್ ಖಾಸಿಂ ಸೊಲೆಮನಿ ಹತ್ಯೆಗೆ ಪ್ರತೀಕಾರವಾಗಿ ಇರಾಕ್ ವಾಯುನೆಲೆಯಲ್ಲಿರುವ ಅಮೆರಿಕ ಪಡೆಗಳ ಮೇಲೆ ಇರಾನ್ ಮಿಸೈಲ್ ದಾಳಿ ನಡೆಸಿರುವ ಹಿನ್ನೆಲೆಯಲ್ಲಿ ಅಮೇರಿಕ ಇರಾಕ್ ನಡುವಿನ ಸಂಘರ್ಷ ಮತ್ತಷ್ಟು ಬಿಗಡಾಯಿಸಿದ್ದು, ಈ ಹಿನ್ನಲೆಯಲ್ಲಿ ಇರಾನ್, ಇರಾಕ್ ಮತ್ತು ಕೊಲ್ಲಿಯ ವಾಯು ಪ್ರದೇಶಕ್ಕೆ ವಿಮಾನಗಳ ಹಾರಾಟ ಸ್ಥಗಿತಗೊಳಿಸುವಂತೆ ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ ಎಂದು ವರದಿಯಾಗಿದೆ.
ಈ ಬಗ್ಗೆ ವಿಮಾನಯಾನ ಸಂಸ್ಥೆಗಳೊಂದಿಗೆ ಸಭೆ ನಡೆಸಿರುವ ವಿದೇಶಾಂಗ ಸಚಿವಾಲಯ ಈ ಸಲಹೆ ನೀಡಿದೆ. ಮಾತ್ರವಲ್ಲದೆ ಇರಾಕ್ ನಲ್ಲಿ ನೆಲೆಸಿರುವ ಭಾರತೀಯ ಪ್ರಜೆಗಳು ಎಚ್ಚರಿಕೆಯಿಂದಿರಲು ಸೂಚಿಸಿದೆ.
ಇರಾಕ್ ನಲ್ಲಿ ಪ್ರಸಕ್ತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಅನಿವಾರ್ಯವಿದ್ದರೆ ಮಾತ್ರ ಇರಾಕ್ಗೆ ಪ್ರಯಾಣ ಬೆಳೆಸಿ, ಇಲ್ಲವಾದರೆ ನಿಮ್ಮ ಪ್ರಯಾಣವನ್ನು ಮುಂದೂಡಿ. ಇರಾಕ್ನಲ್ಲಿ ಓಡಾಡುವಾಗಲೂ ಭಾರತೀಯ ಪ್ರಜೆಗಳು ಎಚ್ಚರ ವಹಿಸಿ ಎಂದು ಕೇಂದ್ರ್ತಸರ್ಕಾರ ಎಚ್ಚರಿಕೆ ನೀಡಿದೆ.