ಬೆಂಗಳೂರು, ಜ.08 (Daijiworld News/PY) : "ದೇಶದಲ್ಲಿ ಈಗ ಸಂವಿಧಾನ ವಿರೋಧ ನಡೆಯುತ್ತಿರುವ ಕಾರಣದಿಂದ ಎನ್ಪಿಆರ್ ಕೇಳಲು ಬಂದರೆ ಜನ ಅದನ್ನು ತಿರಸ್ಕರಿಸಬೇಕು, ಜನಗಣತಿಗೆ ಮಾತ್ರ ಸಹಕಾರ ನೀಡಿ" ಎಂದು ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ಹೇಳಿದ್ದಾರೆ.
ಬುಧವಾರ ನಗರದಲ್ಲಿ ದಲಿತ ಒಕ್ಕೂಟ ಹಮ್ಮಿಕೊಂಡ ಪೌರತ್ವ ಕಾಯ್ದೆ ಕುರಿತ ರಾಜ್ಯ ಮಟ್ಟದ ವಿಚಾರ ಸಂಕೀರ್ಣದಲ್ಲಿ ಮಾತನಾಡಿದ ಅವರು, "ಮುಸ್ಲಿಮರ ವಿರುದ್ದ ನಡೆದ ಈ ಷಡ್ಯಂತ್ರ ದಲಿತರ ವಿರುದ್ದವೂ ನಡೆದದ್ದೂ ಹೌದು, ಇಂತಹ ಷಡ್ಯಂತ್ರಗಳನ್ನು ಶಾಂತಿಯುತ ಅಸಹಕಾರ ತೋರಿಸುವ ಮೂಲಕ ಹೊಡೆದೋಡಿಸಬೇಕು" ಎಂದು ತಿಳಿಸಿದರು.
ಈ ಹಿಂದೆಯೂ ಸರ್ಕಾರದ ವಿರುದ್ದ ಸಿಡಿದಿದ್ದ ಸಸಿಕಾಂತ್ ಸೆಂಥಿಲ್, ದೇಶದಲ್ಲಿ ನಡೆಯುತ್ತಿರುವ ಸಂವಿಧಾನ ವಿರೋಧದ ಬಗ್ಗೆಯೂ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.