ಶಬರಿಮಲೆ, ಜ 8 (Daijiworld News/MB) : ಕೇರಳದ ಶಬರಿ ಮಲೆಗೆ ಯಾತ್ರೆ ಮಾಡುವ ಯಾತ್ರಿಕರಿಗೆ ಕಾಡಿನ ದಾರಿಯ ಮೂಲಕ ಸಾಗುವ ದಾರಿಯಲ್ಲಿ ರಾತ್ರಿ ಹೊತ್ತು ಯಾತ್ರೆ ಮಾಡುವುದನ್ನು ಭಕ್ತಾದಿಗಳ ಹಿತಾದೃಷ್ಟಿಯಿಂದ ನಿರ್ಬಂಧ ಮಾಡಲಾಗಿದೆ.
ಅಳುದಾ ಬೆಟ್ಟ ಹಾಗೂ ಕರಿಮಲೆಯಲ್ಲಿ ಕಾಡಾನೆಗಳು ಹೆಚ್ಚಾಗಿದ್ದು, ಭಕ್ತರ ಮೇಲೆ ಎರಗಿ ಅವರ ಪ್ರಾಣಕ್ಕೆ ಹಾನಿಯಾಗಿರುವ ಹಿನ್ನಲೆಯಲ್ಲಿ ಕೇರಳ ಅರಣ್ಯ ಇಲಾಖೆ ಮುಂಜಾಗ್ರತಾ ಕ್ರಮ ಕೈಗೊಂಡಿದ್ದು ರಾತ್ರಿ ವೇಳೆ ಕಾಡಿನ ದಾರಿಯಲ್ಲಿ ಪ್ರಯಾಣ ಮಾಡಲು ನಿರ್ಬಂಧ ಮಾಡಿದೆ.
ಅಯ್ಯಪ್ಪ ನಡೆದುಕೊಂಡ ದಾರಿಯಾದ ಎರಿಮೇಲಿಯಿಂದ ಕಾಲಕಟ್ಟಿ, ಅಳುದಾ ನದಿ ದಾಟಿ ಕಲ್ಲಿಡಾಕುನ್ನು, ಅಳುದಾ ಮಲೆ, ಕರಿಮಲೆ ದಾಟಿ ಪಂಪಾ ಮೂಲಕ ಹಾದಿಯಲ್ಲಿ ಹೆಚ್ಚಿನ ಭಕ್ತಾದಿಗಳು ತೆರಳುತ್ತಿದ್ದು ಡಿ.29 ರಂದು ಈ ಕಾಡಿನ ಹಾದಿಯು ತೆರೆದುಕೊಂಡಿದೆ. ಜ.15ರ ತನಕವೂ ಈ ಹಾದಿಯಲ್ಲಿ ಭಕ್ತರು ಬರುತ್ತಿರುತ್ತಾರೆ.
ಕಾಡಾನೆ ದಾಳಿ ನಡೆಸುವ ಸಾಧ್ಯತೆ ಇರುವ ಹಿನ್ನಲೆಯಲ್ಲಿ ಕೇರಳ ಅರಣ್ಯ ಇಲಾಖೆಯಿಂದ ಭಕ್ತಾದಿಗಳಿಗೆ ಅಲ್ಲಲ್ಲಿ ಮಾಹಿತಿ ನೀಡಲಾಗುತ್ತಿದ್ದು ಸೂಚನಾ ಫಲಕಗಳ ಅಳವಡಿಕೆ ಕೂಡಾ ಮಾಡಲಾಗಿದೆ.