ನವದೆಹಲಿ,ಜ 08 (Daijiworld News/MSP): ನರೇಂದ್ರ ಮೋದಿಯವರ ನೇತೃತ್ವದ ಭಾರತವು 2020ರ ಐದನೇ ಅತಿದೊಡ್ಡ ಭೌಗೋಳಿಕ ರಾಜಕೀಯ ಅಪಾಯವಾಗಿದೆ ಎಂದು ವಿಶ್ವದ ಪ್ರಮುಖ ರಾಜಕೀಯ ಅಪಾಯಗಳ ಸಲಹೆಗಾರ "ಯುರೇಷಿಯಾ ಗ್ರೂಪ್ " ತಿಳಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಎರಡನೇ ಅವಧಿಯ ಅಧಿಕಾರದಲ್ಲಿ ಬಹುಪಾಲು ವಿವಾದಾತ್ಮಕ ಸಾಮಾಜಿಕ ನೀತಿಗಳಲ್ಲೇ ಕಳೆದಿದ್ದಾರೆ. ತೀವ್ರವಾದ ಕೋಮು ಮತ್ತು ಪಂಥೀಯ ಅಸ್ಥಿರತೆ, ವಿದೇಶಾಂಗ ನೀತಿ ಮತ್ತು ಆರ್ಥಿಕ ಹಿನ್ನಡೆಗಳ ಪರಿಣಾಮಗಳನ್ನು ಭಾರತ 2020 ಎದುರಿಸಬೇಕಾದಿತು ”ಎಂದು ಯುರೇಷಿಯಾ ಗ್ರೂಪ್ನ ವರದಿ ತಿಳಿಸಿದೆ.
ಯುರೇಷಿಯಾ ಗ್ರೂಪ್ನ ಅಧ್ಯಕ್ಷ ಇಯಾನ್ ಬ್ರೆಮ್ಮರ್ ಸಹ ಲೇಖಕರಾಗಿರುವ ‘ಇಂಡಿಯ ಗೆಟ್ಸ್ ಮೋದಿ-ಫೈಡ್’ ಎಂಬ ಶೀರ್ಷಿಕೆ ವಿಶ್ಲೇಷಣೆ ವರದಿಯಲ್ಲಿ ಈ ವಿಚಾರ ಉಲ್ಲೇಖಿಸಲಾಗಿದೆ.
ಬ್ರೆಮ್ಮರ್ ಅವರು ಈ ಹಿಂದೆ 2019 ಟೈಮ್ ನಿಯತಕಾಲಿಕೆಯಲ್ಲಿ ಪ್ರಧಾನಿ ಮೋದಿ ಅವರನ್ನು "ಆರ್ಥಿಕ ಸುಧಾರಣೆಯ ಅತ್ಯುತ್ತಮ ಭರವಸೆ” ಎಂದು ವಾದಿಸಿದ್ದರು. ಇದೇ ಆವೃತ್ತಿಯಲ್ಲಿ ಲೇಖಕ ಆತೀಶ್ ತಸೀರ್ ಅವರು ಪ್ರಧಾನ ಮಂತ್ರಿ ಮೋದಿ ಅವರನ್ನು “ಡಿವೈಡರ್-ಇನ್- ಚೀಫ್" ಎಂದು ಕರೆದಿದ್ದರು.
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಯುಎಸ್ ದೇಶೀಯ ರಾಜಕಾರಣ, ತಂತ್ರಜ್ಞಾನ ಕ್ಷೇತ್ರದಲ್ಲಿ ಯುಎಸ್ ಮತ್ತು ಚೀನಾವನ್ನು "ವಿಭಜನೆ" ಮಾಡುವುದು ಮತ್ತು ಪ್ರತಿಕೂಲಕಾರಿಯಲ್ಲದ ಯುಎಸ್-ಚೀನಾ ಸಂಬಂಧಗಳು ಈ ಪಟ್ಟಿಯಲ್ಲಿ ಅಗ್ರ ಮೂರು ಅಪಾಯಗಳಾಗಿವೆ ಎಂದು ವಿಶ್ಲೇಷಣೆ ವರದಿ ತಿಳಿಸಿದೆ.