ಉತ್ತರಪ್ರದೇಶ, ಜ.08 (Daijiworld News/PY) : ಗೋರಖ್ಪುರ್ನಲ್ಲಿ ಶಹೀದ್ ಅಶ್ಫಕುಲ್ಲಾ ಖಾನ್ ಅವರ ಹೆಸರಿನಲ್ಲಿ ಪ್ರಾಣಿ ಉದ್ಯಾನ ನಿರ್ಮಾಣಕ್ಕಾಗಿ 234 ಕೋಟಿ ರೂ.ಗಳ ಪ್ರಸ್ತಾಪಕ್ಕೆ ಯುಪಿ ಕ್ಯಾಬಿನೆಟ್ ಅನುಮೋದನೆ ನೀಡಿದೆ.
121 ಎಕರೆ ಪ್ರದೇಶದಲ್ಲಿ ಮೃಗಾಲಯ ಮೂಡಿಬರಲಿದ್ದು, ಪ್ರವಾಸಿತಾಣವಾಗಲಿರುವ ಈ ಮೃಗಾಲಯ ಪ್ರವಾಸಿಗರನ್ನು ಆಕರ್ಷಿಸಿದೆ ಹಾಗೂ ಉದ್ಯೋಗಾವಕಾಶಗಳನ್ನು ಹೆಚ್ಚಿಸುವುದು ಇದರ ಉದ್ದೇಶವಾಗಿದೆ ಎಂದು ಸರ್ಕಾರದ ವಕ್ತಾರರು ತಿಳಿಸಿದ್ದಾರೆ.
ಪ್ರಸ್ತುತ ಗೋರಕ್ಪುರದಲ್ಲಿ 2 ಪ್ರಾಣಿ ಸಂಗ್ರಹಾಲಯವಿದೆ. ಒಂದು ಲಕ್ನೋದಲ್ಲಿದೆ ಹಾಗೂ ಮತ್ತೊಂದು ಪ್ರಾಣಿ ಸಂಗ್ರಹಾಲಯ ಕಾನ್ಪುರ್ನಲ್ಲಿದೆ.
ಶಹೀದ್ ಅಶ್ಫಕುಲ್ಲಾ ಖಾನ್ ಹೆಸರಿನಲ್ಲಿ ಪ್ರಾಣಿಸಂಗ್ರಹಾಲಯ ಮಾಡುವ ಬಗ್ಗೆ 2008-2009ರಲ್ಲಿ ಪ್ರಸ್ತಾಪಿಸಲಾಗಿತ್ತು. ಈ ಪ್ರಾಣಿಸಂಗ್ರಹಾಲಯದಿಂದ ಗೋರಕ್ಪುರ್ ಪ್ರವಾಸಿತಾಣವಾಗಿ ಜನಪ್ರಿಯತೆ ಗಳಿಸಲಿದೆ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆಯಲಿದ್ದು, ವನ್ಯಜೀವಿಗಳ ಸಂರಕ್ಷಣೆ ಈ ಪ್ರಾಣಿಸಂಗ್ರಹಾಲಯದ ಮುಖ್ಯ ಉದ್ದೇಶ ಎಂದು ಕ್ಯಾಬಿನೆಟ್ ಸಚಿವ ಮತ್ತು ಸರ್ಕಾರಿ ವಕ್ತಾರ ಶ್ರೀಕಾಂತ್ ಶರ್ಮಾ ಹೇಳಿದ್ದಾರೆ.