ನವದೆಹಲಿ, ಜ.09 (Daijiworld News/PY) : ಈ ವರ್ಷ ಜ.31 ರಿಂದ ಏ.3ರವರೆಗೆ ಸಂಸತ್ತಿನ ಬಜೆಟ್ ಅಧಿವೇಶನ ಎರಡು ಹಂತದಲ್ಲಿ ನಡೆಯಲಿದೆ.
ಮೊದಲ ಹಂತದ ಬಜೆಟ್ ಅಧಿವೇಶನವು ಜ.31ರಿಂದ ಫೆ. 11ರವರೆಗೆ ನಡೆಯಲಿದೆ. ಬಿಜೆಪಿ ನೇತೃತ್ವದ ಎನ್ ಡಿಎ-2 ಸರ್ಕಾರದ ಪೂರ್ಣ ಬಜೆಟ್ ಫೆ.1ರಂದು ಮಂಡನೆಯಾಗಲಿದ್ದು, 2020-21ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಲಿದ್ದಾರೆ
ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದ ಸಂಸದೀಯ ವ್ಯವಹಾರಗಳ ಸಂಪುಟ ಸಮಿತಿ ಭೇಟಿ ಮಾಡಿ ಬಜೆಟ್ ಅಧಿವೇಶನದ ವೇಳಾಪಟ್ಟಿಯನ್ನು ಶಿಫಾರಸು ಮಾಡಿದ್ದು, ಅಲ್ಪ ವಿರಾಮದ ಬಳಿಕ 2ನೇ ಹಂತದ ಅಧಿವೇಶನ ಮಾ.2 ರಿಂದ ಏ.3ರವರೆಗೆ ನಡೆಯಲಿದೆ.