ನವದೆಹಲಿ, ಜ.09 (Daijiworld News/PY) : ಸಿಎಎ ಸಿಂಧುತ್ವ ಹಾಗೂ ಸಿಎಎ ಸಂವಿಧಾನಬದ್ದ ಎಂಬುದಾಗಿ ಘೋಷಿಸಬೇಕೆಂದು ಕೋರಿ ನೀಡಿದ್ದ ಮೇಲ್ಮನವಿಯನ್ನು ಹಿಂಸಾಚಾರ ನಿಂತ ನಂತರ ಸಿಎಎ ಬಗ್ಗೆ ವಿಚಾರಣೆ ಮಾಡುವುದಾಗಿ ಜ.9ರ ಗುರುವಾರ ಸುಪ್ರೀಂಕೋರ್ಟ್ ತಿಳಿಸಿದೆ.
ಪ್ರಸ್ತುತ ದೇಶವು ಸಂದಿಗ್ದ ಸ್ಥಿತಿಯಲ್ಲಿದೆ. ಈ ತರಹದ ಮೇಲ್ಮವಿಗಳಿಂದ ಸಹಾಯವಾಗಲ್ಲ , ಆದ್ದರಿಂದ ಸಿಎಎ ಕುರಿತ ಅರ್ಜಿ ವಿಚಾರವನ್ನು ಹಿಂಸಾಚಾರ ನಿಂತ ಬಳಿಕವೇ ನಡೆಸುವುದಾಗಿ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೋಬ್ಡೆ ತಿಳಿಸಿದ್ದಾರೆ.
ಸಿಎಎ ಅನ್ನು ಸಂವಿಧಾನಬದ್ದ ಎಂದು ಘೋಷಿಸಬೇಕು, ಕಾನೂನಿನ ಬಗ್ಗೆ ಪ್ರತಿಭಟನೆ ಮಾಡುತ್ತಿರುವ ಸಾಮಾಜಿಕ ಕಾರ್ಯಕರ್ತರು, ವಿದ್ಯಾರ್ಥಿಗಳು, ಸುಳ್ಳು ಸುದ್ದಿಗಳನ್ನು ರವಾನಿಸುತ್ತಿರುವ ಮಾಧ್ಯಮಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ನಿರ್ದೇಶನ ಕೊಡಬೇಕೆಂದು ಕೋರಿ ವಕೀಲ ವಿನೀತ್ ಧಾಂಡಾ ಮೇಲ್ಮನವಿ ಸಲ್ಲಿಸಿದ್ದರು.
ಸಂವಿಧಾನದ ಬಗ್ಗೆ ಈಗಾಗಲೇ ಪೂರ್ವಭಾವನೆ ಹೊಂದಲಾಗಿದೆ. ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಅಂಗೀಕರಿಸಿದ ಸಂಸತ್ ಅನ್ನು ಸಂವಿಧಾನಬದ್ದ ಎಂಬುದಾಗಿ ನಾವು ಹೇಗೆ ಘೋಷಿಸುವುದು, ಒಂದು ವೇಳೆ ನೀವು ಕಾನೂನು ವಿದ್ಯಾರ್ಥೀಯಾಗಿದ್ದರೆ ನಿಮಗೆ ಈ ವಿಷಯದ ಬಗ್ಗೆ ತಿಳಿಯಲಿದೆ ಎಂದು ಸಿಜೆಐ ಬೋಬ್ಡೆ ಹೇಳಿದ್ದಾರೆಂದು ವರಿದಿ ತಿಳಿಸಿದೆ.
ಕಾನೂನಿನ ಸಿಂಧುತ್ವವವನ್ನು ತೀರ್ಮಾನಿಸುವುದು ನ್ಯಾಯಾಲಯದ ಕಾರ್ಯವಾಗಿದೆ. ಇದು ಸಂವಿಧಾನಬದ್ದ ಎಂದು ಘೋಷಿಸುವುದು ಅಲ್ಲ ಎಂದು ಸಿಜೆಐ ಬೋಬ್ಡೆ, ನ್ಯಾಯವಾಧಿ ಬಿ ಆರ್ ಗವಿ ಹಾಗೂ ನ್ಯಾಯವಾಧಿ ಸೂರ್ಯಕಾಂತ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ತಿಳಿಸಿದೆ.