ನವದೆಹಲಿ, ಜ.09 (Daijiworld News/PY) : ಜ.5ರ ಭಾನುವಾರದಂದು ಜೆಎನ್ಯುನಲ್ಲಿ ಮುಸುಕುಧಾರಿಗಳಿಂದ ನಡೆದ ಹಿಂಸಾಚಾರವನ್ನು ಖಂಡಿಸಿ ಹಾಗೂ ಜೆಎನ್ಯು ಉಪಕುಲಪತಿ ರಾಜೀನಾಮೆ ನೀಡಬೇಕು ಎಂಬ ಉದ್ದೇಶದಿಂದ ದೆಹಲಿಯ ಮಂಡಿ ಹೌಸ್ನಿಂದ ಆರಂಭಿಸಿ ರಾಷ್ಟ್ರಪತಿ ಭವನದವರೆಗೆ ಪ್ರತಿಭಟನಾ ಮೆರವಣಿಗೆ ಮಾಡಿದ ಜೆಎನ್ಯು ವಿದ್ಯಾರ್ಥಿಗಳನ್ನು ಗುರುವಾರ ದೆಹಲಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ಧಾರೆ.
ವಿದ್ಯಾರ್ಥಿಗಳು, ಶಿಕ್ಷಕರು ಸೇರಿದಂತೆ ಸಾಮಾಜಿಕ ಸಂಸ್ಥೆಗಳ ಸದಸ್ಯರು ಮಂಡಿ ಹೌಸ್ನಿಂದ ಪ್ರತಿಭಟನೆ ಆರಂಭಿಸಿದ್ದರು.
ವಿದ್ಯಾರ್ಥಿಗಳ ಪ್ರತಿಭಟನಾ ಮೆರವಣಿಗೆಯು ರಾಷ್ಟ್ರಪತಿ ಭವನದತ್ತ ಹೋಗುತ್ತಿರುವ ಸಂದರ್ಭ ಪೊಲೀಸರು ತಡೆಯೊಡಿದ್ಧಾರೆ. ಬ್ಯಾರಿಕೇಡ್ಗಳ ಮುಂದೆ ನಿಂತು ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು ಬ್ಯಾರಿಕೇಡ್ ಮುರಿದು ಮುಂದೆ ಹೋಗಲು ಯತ್ನಿಸಿದ್ದು, ಈ ಸಂದರ್ಭ ಪೊಲೀಸರು ವಿದ್ಯಾರ್ಥಿಗಳನ್ನು ವಶಕ್ಕೆಪಡೆದುಕೊಂಡಿದ್ದಾರೆ.