ಹೈದರಬಾದ್, ಜ 11(Daijiworld News/MSP): ನೀವು ಕಲ್ಲೆಸದರೆ ನಾವು ಬಾಂಬ್ ಎಸೆಯಬೇಕಾಗುತ್ತದೆ ಎಚ್ಚರಿಕೆ ಎಂದು ತೆಲಂಗಾಣ ಬಿಜೆಪಿ ಸಂಸದ ಬಂಡಿ ಸಂಜಯ್ ಕುಮಾರ್ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಸಂಸದ ಬಂಡಿ ಸಂಜಯ್ ಅವರು ವಾರಂಗಲ್ನ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ , ಆಲ್ ಇಂಡಿಯಾ ಮಜ್ಲಿಸ್–ಎ–ಇತ್ತೇಹಾದುಲ್ ಮುಸ್ಲಿಮೀನ್ (ಎಐಎಂಐಎಂ), ಟಿಆರ್ಎಸ್ ನಾಯಕರು ಬಿಜೆಪಿ ಕಾರ್ಯಕರ್ತರ ಮೇಲೆ ಕಲ್ಲು ತೂರಿದರೆ ನಾವು ಬಾಂಬ್ ಗಳ ಮೂಲಕ ಉತ್ತರಿಸಬೇಕಾಗಬಹುದು ಅವರು ಕೋಲು, ಕಲ್ಲು ಎತ್ತಿಕೊಂಡರೆ ನಾವು ಕೈಕಟ್ಟಿ ಕುಳಿತುಕೊಳ್ಳುವವರಲ್ಲ, ಇಲ್ಲಿ ಹಸಿರು ದ್ವಜಕ್ಕೆ ಜಾಗವಿಲ್ಲ ಎಂದು ಹೇಳಿದ್ದಾರೆ.
ಸಿಎಎ ಹಾಗೂ ಎನ್ಆರ್ಸಿ ವಿರುದ್ಧ ಟೀಕೆ ಮಾಡುತ್ತಿರುವ ಎಐಎಂಐಎಂ ಹಾಗೂ ಟಿಆರ್ಎಸ್ ನಾಯಕರನ್ನು ತರಾಟೆಗೆತ್ತಿಕೊಂಡ ಸಂಸದ ಬಂಡಿ, ರಾಜ್ಯದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಡೆಯುವ ಪ್ರತಿಭಟನೆಗಳಿಗೆ ಸಿಎಂ ಕೆ.ಸಿ.ಚಂದ್ರಶೇಖರ್ ರಾವ್ ಹಣಕಾಸು ನೆರವು ನೀಡುತ್ತಿದ್ದಾರೆ. ಇದೇ ಕಾರಣಕ್ಕೆ ಹನುಮಕೊಂಡ ರ್ಯಾಲಿಯಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ದುಷ್ಕರ್ಮಿಗಳು ಕಲ್ಲೂ ತೂರಾಟ ನಡೆಸಿದರು ಇಂತಹ ಘಟನೆ ಮುಂದುವರಿದರೆ, ಬಿಜೆಪಿ ಕಾರ್ಯಕರ್ತರು ಬಾಂಬ್ ಹಾಗೂ ಗ್ರೆನೇಡ್ ಮೂಲಕ ಉತ್ತರಿಸಬೇಕಾಗಿತು ಎಂದು ಆಕ್ರೋಶ ವ್ಯಕ್ತಪಡಿಸಿತ್ತಾ ವಿವಾದಾತ್ಮಕ ಮಾತುಗಳನ್ನಾಡಿದ್ದಾರೆ.