ಬೆಂಗಳೂರು, ಜ 11 (Daijiworld News/MB) : ಮಂಗಳೂರು ಗಲಭೆಯ ಕುರಿತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಶುಕ್ರವಾರ ಬಿಡುಗಡೆ ಮಾಡಿರುವ ವಿಡಿಯೋ ಕುರಿತು ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಯಡಿಯೂರಪ್ಪ, "ಈ ವಿಡಿಯೋಗಳು ಕಟ್ ಆಂಡ್ ಪೇಸ್ಟ್" ಎಂದು ಆರೋಪ ಮಾಡಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು , "ವಿಡಿಯೋ ಬಿಡುಗಡೆ ಮಾಡುವುದಕ್ಕೆ ಅರ್ಥ ಇದೆಯೇನ್ರಿ? ಅಲ್ಲದೆ ಈ ವಿಡಿಯೋ ಕಟ್ ಆಂಡ್ ಪೇಸ್ಟ್ ವಿಡಿಯೋ" ಎಂದು ಹೇಳಿದರು.
"ಈ ವಿಡಿಯೋ ಕಟ್ ಆಡ್ ಪೇಸ್ಟ್, ಇದಕ್ಕೆಲ್ಲಾ ಪ್ರತಿಕ್ರಿಯೆ ನೀಡುವ ಅಗತ್ಯವಿದೆಯಾ?" ಎಂದು ಹೇಳಿದ್ದಾರೆ.