ಬೆಂಗಳೂರು, ಜ 11 (Daijiworld News/MB) : ಮಂಗಳೂರಿನಲ್ಲಿ ನಡೆದ ಗಲಭೆಯ ಬೆಳಿಗ್ಗೆ 9ರಿಂದ ಆರಂಭಿಸಿ ಪೊಲೀಸರು ಗೋಲಿಬಾರ್ ನಡೆಯುವವರೆಗೆ ಘಟಿಸಿದ ಎಲ್ಲಾ ವಿದ್ಯಮಾನಗಳ ವಿಡಿಯೋವನ್ನು ಸರ್ಕಾರ ತಕ್ಷಣವೇ ಅಧಿಕೃತವಾಗಿ ಬಿಡುಗಡೆ ಮಾಡಬೇಕೆಂದು ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಎಸ್. ಎಲ್. ಭೋಜೇಗೌಡ ಒತ್ತಾಯಿಸಿದ್ದಾರೆ.
"ಮಂಗಳೂರಿನಲ್ಲಿ ಗೋಲಿಬಾರ್ ನಡೆದ ದಿನದ ಎಲ್ಲಾ ವಿಡಿಯೋಗಳನ್ನು ಮಂಗಳೂರು ಪೊಲೀಸ್ ಕಮಿಷನರ್ ಹಾಗೂ ರಾಜ್ಯ ಸರ್ಕಾರ ಕೂಡಲೇ ಬಿಡುಗಡೆ ಮಾಡಲಿ. ಆಗ ಈ ಘಟನೆಯ ಸತ್ಯ ವಿಚಾರ ಬಯಲಾಗುತ್ತದೆ" ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಜೆಡಿಎಸ್ ನಾಯಕ ಕುಮಾರಸ್ವಾಮಿ ಅವರು ಬಿಡುಗಡೆ ಮಾಡಿರುವ ಸಿಡಿ ಕಟ್ ಆಂಡ್ ಪೇಸ್ಟ್ ಎಂದ ಹೇಳಿಕೆಗೆ ಎಸ್. ಎಲ್. ಭೋಜೇಗೌಡ ಅವರು ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.