ನವದೆಹಲಿ, ಜ.11 (Daijiworld News/PY) : "ಪಾಕ್ ಆಕ್ರಮಿತ ಕಾಶ್ಮೀರವನ್ನು ವಶಪಡೆಯಬೇಕು ಎಂದು ಸರ್ಕಾರದಿಂದ ಆದೇಶ ಸಿಕ್ಕರೆ ಸೇನೆ ಸಿದ್ದವಾಗಲಿದೆ" ಎಂದು ಭಾರತೀಯ ಸೇನೆಯ ಮುಖ್ಯಸ್ಥ ಮನೋಜ್ ಮುಕುಂದ್ ನರವಾಣೆ ಹೇಳಿದ್ದಾರೆ.
ದೆಹಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಇಡೀ ಜಮ್ಮು-ಕಾಶ್ಮೀರ ಸೇರಿದಂತೆ ಪಾಕಿಸ್ತಾನ ಆಕ್ರಮಣ ಮಾಡಿ ವಶಪಡಿಸಿಕೊಂಡಿರುವ ಪ್ರದೇಶಗಳು ಭಾರತಕ್ಕೆ ಸೇರಿದ್ದು ಎಂದು ಸಂಸತ್ತಿನಲ್ಲಿ ನಿರ್ಣಯವಾಗಿದೆ. ಇದನ್ನು ಸಂಸತ್ತು ಒಪ್ಪಿದರೆ ಪಿಒಕೆ ಭಾರತಕ್ಕೆ ಸೇರಬೇಕು" ಎಂದು ಹೇಳಿದರು.
"ನಮಗೆ ಆದೇಶ ಸಿಕ್ಕರೆ ಪಿಒಕೆ ದಾಳಿ ಮಾಡಲು ಸೇನೆ ಸಿದ್ದವಾಗಲಿದೆ. ಆದರೆ ಅದಕ್ಕೆ ಸರ್ಕಾರದ ಒಪ್ಪಿಗೆ ಸಿಗಬೇಕಿದೆ" ಎಂದು ಹೇಳಿದರು.
>