ಮಂಗಳೂರು, ಜ.11 (Daijiworld News/PY) : ಕೋಲ್ಕಾತದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಮಾಡಿದ್ದು ಸಿಎಎ ಹಾಗೂ ಎನ್ಆರ್ಸಿಯನ್ನು ಜಾರಿಗೊಳಿಸಬಾರದೆಂದು ಮನವಿ ಮಾಡಿಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.
ರಾಜಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಮತಾ ಬ್ಯಾನರ್ಜಿ, ನಾವು ಸಿಎಎ ಹಾಗೂ ಎನ್ಆರ್ಸಿ ಅನ್ನು ವಿರೋಧಿಸುತ್ತೇವೆ. ಆದ್ದರಿಂದ ಸಿಎಎ ಹಾಗೂ ಎನ್ಆರ್ಸಿಯನ್ನು ಅನುಷ್ಠಾನಗೊಳಿಸಬಾರದು ಎಂದು ಮನವಿ ಮಾಡಿದ್ದಾರೆ ಎಂದು ತಿಳಿಸಿದ್ದಾರೆ ಎಂದು ವರದಿ ತಿಳಿಸಿದೆ.
ಮಮತಾ ಬ್ಯಾನರ್ಜಿ ಅವರ ಮಾತಿಗೆ ಪ್ರತಿಕ್ರಿಯೆ ನೀಡಿ ಮೋದಿ ಈ ವಿಚಾರವಾಗಿ ಪರಿಶೀಲಿಸುವ ಭರವಸೆ ನೀಡಿರುವುದಾಗಿ ದೀದಿ ತಿಳಿಸಿದ್ದು, ಇದೇ ವೇಳೆ ಮುಖ್ಯಮಂತ್ರಿಯವರು ನವೆಂಬರ್ನಲ್ಲಿ ಸಂಭವಿಸಿದ ಬುಲ್ಬುಲ್ ಸೈಕ್ಲೋನ್ನ ದಾಳಿಗೆ ಪರಿಹಾರ ನೀಡುವಂತೆಯೂ ಕೇಳಿದ್ದಾರೆ ಎಂದು ವರದಿ ತಿಳಿಸಿದೆ.
ದೇಶದಾತ್ಯಂತ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧ ನಡೆಯುತ್ತಿರುವ ಹೋರಾಟದ ಬಳಿಕ ಇಬ್ಬರು ಪ್ರಮುಖ ನಾಯಕರು ಮುಖಾಮುಖಿ ಭೇಟಿಯಾಗಿದ್ದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.
ಜ.13ರಂದು ವಿರೋಧ ಪಕ್ಷಗಳು ನಡೆಸಲಿರುವ ಪ್ರತಿಭಟನೆಯಿಂದ ದೂರ ಉಳಿಯುವಂತೆ ಮಮತಾ ಬ್ಯಾನರ್ಜಿ ನಿರ್ಧರಿಸಿದ್ದಾರೆ ಎಂದು ವರದಿ ತಿಳಿಸಿದೆ.