ಬೆಂಗಳೂರು, ಜ 11 (Daijiworld News/MSP): ರಾಜ್ಯದ ಗ್ರಾಮ ಪಂಚಾಯಿತಿ ಚುನಾವಣೆ ಘೋಷಿಸಲಾಗಿದೆ ಎಂದು ನಕಲಿ ಅಧಿಸೂಚನೆಯನ್ನು ತೇಲಿಬಿಟ್ಟು ಗೊಂದಲ ಸೃಷ್ಟಿಸಿದ ದುಷ್ಕರ್ಮಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ರಾಜ್ಯ ಚುನಾವಣಾ ಆಯೋಗ ತಿಳಿಸಿದೆ. ಈ ಕುರಿತು ಸೋಮವಾರ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಲಿದ್ದು, ನಕಲಿ ಅಧಿಸೂಚನೆಯನ್ನು ಸಾಮಾಜಿಕ ಜಾಲ ತಾಣಗಳಿಗೆ ಹರಿಯಬಿಟ್ಟ ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳಲು ಮನವಿ ಮಾಡಲಾಗುವುದು ಎಂದು ಆಯೋಗ ತಿಳಿಸಿದೆ.
ರಾಜ್ಯದ ಗ್ರಾಮ ಪಂಚಾಯಿತಿ ಚುನಾವಣೆ ಘೋಷಿಸಿರುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಕರ್ನಾಟಕ ರಾಜ್ಯಪತ್ರ ವಿಶೇಷ ರಾಜ್ಯ ಪತ್ರಿಕೆ ಹೆಸರಿನಲ್ಲಿ ಸುತ್ತೋಲೆಯೊಂದು ಪ್ರಕಟಗೊಂಡಿತ್ತು. ಕ್ರಮಸಂಖ್ಯೆ ಸೇರಿದಂತೆ ಎಲ್ಲಾ ಮಾಹಿತಿಗಳಿದ್ದು ಅಸಲಿಯೋ ನಕಲಿಯೋ ಕಂಡುಹಿಡಿಯಲಾಗದಂತಿತ್ತು. ರಾಜ್ಯಪತ್ರದಲ್ಲಿ. ಏ.5 ಮತ್ತು 9 ರಂದು ಚುನಾವಣೆ ಯಲಿದ್ದು ನಾಮಪತ್ರ ಸಲ್ಲಿಕೆ ಮತ್ತು ಮತದಾನ ಸೇರಿದಂತೆ ಯಾವ ಮಾಹಿತಿಯೂ ಪ್ರಕಟಣೆಯಲ್ಲಿರಲಿಲ್ಲ.
ಮಾತ್ರವಲ್ಲಿದೆ ಕಿಡಿಗೇಡಿಗಳು ಚುನಾವಣೆಯಲ್ಲಿ ಸ್ಪರ್ಧಿಸುವವರು ಚುನಾವಣಾ ಗುರುತಿನ ಚೀಟಿ, ಆಧಾರ್ ಕಾರ್ಡ್, ಪಾನ್ ಕಾರ್ಡ್, ಆದಾಯ, ಜಾತಿ ಪ್ರಮಾಣಪತ್ರ, ಆರಕ್ಷಕ ದೃಢೀಕರಣ ಪತ್ರಗಳನ್ನು ಕಡ್ಡಾಯವಾಗಿ ಹೊಂದಿರಬೇಕು. ಜಿಲ್ಲಾ ಉಸ್ತುವಾರಿ ಚುನಾವಣಾಧಿಕಾರಿಗಳಿಂದ ಆಕ್ಷೇಪಣಾ ಪತ್ರ ಕೊಟ್ಟ ನಂತರ ನಾಮಪತ್ರ ಸಲ್ಲಿಸಬೇಕು, ಪ್ರೌಢಶಿಕ್ಷಣ ಕಡ್ಡಾಯವಾಗಿ ಪಡೆದಿರಬೇಕು, ಅಭ್ಯರ್ಥಿಗಳ ಪೋಷಕರಾಗಲಿ, ಕುಟುಂಬಸ್ಥರಾಗಲಿ ಸರ್ಕಾರಿ, ಅರೆ ಸರ್ಕಾರಿ ಉದ್ಯೋಗದಲ್ಲಿರಬಾರದು, ವಯೋಮಿತಿ, ಲಿಂಗಬೇಧ ಇರುವುದಿಲ್ಲ. ಎರಡು ಸ್ಥಳಗಳಲ್ಲಿ ಚುನಾವಣಾ ಪಟ್ಟಿಯಲ್ಲಿ ಹೆಸರು ನಮೂದಾಗಿರಬಾರದು ಎಂದು ನಕಲಿ ಅಧಿಸೂಚನೆಯಲ್ಲಿ ಉಲ್ಲೇಖಿಸಿದ್ದರು
ಅತ್ಯಂತ ಕ್ಷಿಪ್ರವಾಗಿ ಹರಿದಾಡಿದ ಈ ಅಧಿಸೂಚನೆ ಸಾರ್ವಜನಿಕರನ್ನಲ್ಲದೇ ಮಾಧ್ಯಮಗಳು ಗೊಂದಲಕ್ಕೊಳಗಾಗಿತ್ತು.