ಮುಂಬೈ, ಜ.12 (Daijiworld News/MB) : ನಿರ್ಮಾಣ ಹಂತದಲ್ಲಿರುವ ರಾಸಾಯನಿಕ ಕಾರ್ಖಾನೆಯಲ್ಲಿ ಭಾರೀ ಸ್ಫೋಟ ಸಂಭವಿಸಿ ಕನಿಷ್ಠ ಎಂಟು ಮಂದಿ ಸಾವನ್ನಪ್ಪಿದ ಘಟನೆ ಮಹಾರಾಷ್ಟ್ರದ ಪಾಲ್ಘಾರ್ ಜಿಲ್ಲೆಯ ಬೊಯ್ಸಾರ್ನಲ್ಲಿ ಶನಿವಾರ ನಡೆದಿದೆ.
ಈ ಸ್ಥಾವರವು ಕೊಳ್ವಾಡೆ ಗ್ರಾಮದಲ್ಲಿರುವ ಮಹಾರಾಷ್ಟ್ರ ಕೈಗಾರಿಕಾ ಅಭಿವೃದ್ಧಿ ನಿಗಮ ಪ್ರದೇಶದಲ್ಲಿದ್ದು ಇದು ಆ್ಯಂಕ್ಫಾರ್ಮಾ ಔಷಧಿ ತಯಾರಿಕಾ ಸಂಸ್ಥೆಗೆ ಸೇರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ
ಶನಿವಾರ ಸಂಜೆ ಸುಮಾರು 7:20 ಗಂಟೆಗೆ ಸ್ಥಾವರದಲ್ಲಿರುವ ಕೆಲವು ರಾಸಾಯನಿಕಗಳನ್ನು ಪರೀಕ್ಷೆ ಮಾಡುವ ಸಂದರ್ಭದಲ್ಲಿ ಒಮ್ಮೆಲ್ಲೆ ಸ್ಪೋಟವಾಗಿದ್ದು ಸ್ಫೋಟದ ತೀವ್ರತೆಯಿಂದ 15ಕಿ.ಮೀ ವಿಸ್ತೀರ್ಣದವರೆಗೂ ಕೇಳಿಸಿದೆ. ಅಷ್ಟು ಮಾತ್ರವಲ್ಲದೇ ಸುತ್ತಮುತ್ತಲು ಇರುವ ಕೆಲವು ಮನೆಗಳ ಕಿಟಕಿ ಗಾಜುಗಳು ಕೂಡಾ ಒಡೆದು ಹೋಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಭಾರೀ ಸ್ಫೋಟದಿಂದಾಗಿ 8 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ ಎಂದಿದ್ದಾರೆ.