ನಾಗ್ಪುರ, ಜ.12 (Daijiworld News/MB) : ಶಸ್ತ್ರಾಸ್ತ್ರ ತಯಾರಿಕಾ ಕಾರ್ಖಾನೆಗಳ ಮಂಡಳಿ(ಒಎಪ್ಬಿ)ಯು ದೇಶದ ಸೇನಾಪಡೆಗೆ ಸ್ಮಾರ್ಟ್ ಬಾಂಬ್ನ್ನು ನಿರ್ಮಾಣ ಮಾಡಲು ನಿರ್ಧಾರ ಮಾಡಿದ್ದು ಇದರೊಂದಿಗೆ ಭಾರತೀಯ ಸೇನೆಗೆ ಸುಧಾರಿತ ಕಾಲಾಳು ಪಡೆ ಯುದ್ಧ ವಿಮಾನ (ಎಫ್ಐಸಿ) ತಯಾರಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ದೇಶದ 41 ಶಸ್ತ್ರಾಸ್ತ್ರ ತಯಾರಿಕಾ ಕಾರ್ಖಾನೆಗಳ ಕಾರ್ಮಿಕರ-ಉದ್ಯೋಗಿಗಳ ಪ್ರಥಮ ಸಮ್ಮೇಳನವನ್ನು ಅಂಬಾಜ್ಗಿರಿಯಲ್ಲಿ ಆಯೋಜನೆ ಮಾಡಲಾಗಿದ್ದು ಈ ಸಮ್ಮೇಳನದಲ್ಲಿ ಈ ಕುರಿತಾದ ಮಾಹಿತಿಗಳನ್ನು ನೀಡಿದ್ದಾರೆ.
ಎಫ್ಐಸಿ ನಿರ್ಮಾಣ ಶೆ.85ರಷ್ಟು ಪೂರ್ಣಗೊಂಡಿದ್ದು ಸ್ಮಾರ್ಟ್ ಬಾಂಬ್ ಅಥವಾ 81 ಮಿಮೀ, 51 ಮಿಮೀ, 120 ಮಿಮೀ ಮತ್ತು 130 ಮಿಮೀ ಒಳಅಳತೆಯ ಸುಧಾರಿತ ಫಿರಂಗಿಗಳನ್ನೂ ತಯಾರಿಸುವ ಯೋಜನೆ ಇದೆ. ಹಾಗೆಯೇ ಭಾರತೀಯ ಸೇನೆಗೆ ಸುಧಾರಿತ ಕಾಲಾಳು ಪಡೆ ಯುದ್ಧ ವಿಮಾನ (ಎಫ್ಐಸಿ) ತಯಾರಿ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.