ಶ್ರೀನಗರ, ಜ.12 (Daijiworld News/MB) : ಉಪ ಪೊಲೀಸ್ ವರಿಷ್ಠಾಧಿಕಾರಿ ದೇವಿಂದರ್ ಸಿಂಗ್ ಸೇರಿದಂತೆ ಇಬ್ಬರು ಉಗ್ರರನ್ನು ಜಮ್ಮು ಕಾಶ್ಮೀರ ಪೊಲೀಸರು ಶನಿವಾರ ಕುಲ್ಗಾಂ ಜಿಲ್ಲೆಯಲ್ಲಿ ಬಂಧನ ಮಾಡಿದ್ದಾರೆ.
ಮೀರ್ ಬಜಾರ್ ರಾಷ್ಟ್ರೀಯ ಹೆದ್ದಾರಿಯ ಬಳಿ ವಾಹನದಲ್ಲಿ ಉಪ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಇಬ್ಬರು ಉಗ್ರರು ಇದ್ದ ಸಂದರ್ಭದಲ್ಲಿ ಪೊಲೀಸ್ ಮತ್ತು ಸೇನೆ ಜಂಟಿ ಕಾರ್ಯಚರಣೆ ನಡೆಸಿ ಅವರನ್ನು ಬಂಧಿಸಿದ್ದು, 5 ಗ್ರೆನೇಡ್ ಅನ್ನು ವಶಪಡಿಸಿಕೊಂಡಿದ್ದಾರೆ. ಹಾಗೆಯೇ ಬಂಧಿತ ಡಿಎಸ್ಪಿ ನಿವಾಸದ ಸಮೀಪದಲ್ಲಿ ಎರಡು ಎಕೆ 47 ರೈಫಲ್ ಗಳನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತ ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ಸೈಯದ್ ನವೀದ್ ಬಾಬಾ ದಕ್ಷಿಣ ಕಾಶ್ಮೀರದ ಮೋಸ್ಟ್ ವಾಂಟೆಡ್ ಉಗ್ರರಲ್ಲಿ ಒಬ್ಬನಾಗಿದ್ದ. ಮಾತ್ರವಲ್ಲದೆ ಪೊಲೀಸರ ಪ್ರಕಾರ ಟ್ರಕ್ ಚಾಲಕರ ಮತ್ತು ಸ್ಥಳೀಯರ ಮೇಲೆ ದಾಳಿ ಮತ್ತು ಹತ್ಯೆ ಪ್ರಕರಣದಲ್ಲಿ ಈತ ಭಾಗಿಯಾಗಿದ್ದ.
ಈ ಪೊಲೀಸ್ ಅಧಿಕಾರಿ 2017 ರಲ್ಲಿ ಉಗ್ರಗಾಮಿಯಾಗಿ ಬದಲಾಗಿದ್ದು ಪ್ರಶಸ್ತಿ ವಿಜೇತರಾಗಿದ್ದರು. ಹಾಗೆಯೇ ಅವರು ಸ್ಫೋಟಕ ತಯಾರಿಕೆಯಲ್ಲಿ ಪರಿಣಿತಿ ಹೊಂದಿದ್ದರು ಎಂದು ವರದಿಯಾಗಿದೆ. ಬಂಧಿತ ಮತ್ತೊಬ್ಬ ಉಗ್ರನನ್ನು ಆಸಿಫ್ ರಥರ್ ಎಂದು ಗುರುತಿಸಲಾಗಿದೆ.