ಕೊಲ್ಕತ್ತಾ, ಜ.12 (Daijiworld News/MB) : ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾಮಿ ವಿವೇಕಾನಂದರ 157ನೇ ಜನ್ಮದಿನೋತ್ಸವ ಪ್ರಯುಕ್ತ ಭಾನುವಾರ ರಾಮಕೃಷ್ಣ ಮಿಷನ್ನ ಪ್ರಧಾನ ಕಚೇರಿ ಇರುವ ಬೇಲೂರು ಮಠಕ್ಕೆ ಭೇಟಿ ನೀಡಿ, ಸ್ವಾಮಿ ವಿವೇಕಾನಂದರ ಚಿತ್ರಪಟಕ್ಕೆ ನಮನ ಸಲ್ಲಿಸಿದರು.
ಸ್ವಾಮಿ ವಿವೇಕಾನಂದ ಅವರು ಕೋಟ್ಯಾಂತರ ಭಾರತೀಯರ ಹೃದಯ ಹಾಗೂ ಮನಸ್ಸಿನಲ್ಲಿ ಜೀವಂತವಾಗಿದ್ದಾರೆ. ಅದರಲ್ಲೂ ಮುಖ್ಯವಾಗಿ ಭಾರತದ ಕ್ರಿಯಾತ್ಮಕ ಯುವಕರಿಗೆ ಅವರು ಆದರ್ಶವಾಗಿದ್ದಾರೆ. ಇಂದು ವಿವೇಕಾನಂದರ ಜಯಂತಿ ಹಾಘೂ ರಾಷ್ಟ್ರೀಯ ದಿನವಾಗಿದ್ದು ನಾನು ಬೇಳೂರು ಮಠದಲ್ಲಿದ್ದೇನೆ. ವಿವೇಕಾನಂದರು ಜ್ಞಾನ ಮಾಡಿದ ಕೊಠಡಿ ನೋಡಿ ನಾನು ಧನ್ಯನಾದೆ ಎಂದು ಟ್ವೀಟ್ ಮಾಡಿದ್ದಾರೆ.
ಮಠದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, "ಹೌರಾದಲ್ಲಿರುವ ಬೇಳೂರು ಮಠಕ್ಕೆ ಭೇಟಿ ನೀಡುವುದು ತೀರ್ಥಯಾತ್ರೆಗೆ ಸಮವಾದದ್ದು. ಸ್ವಾಮಿ ವಿವೇಕಾನಂದರ ಜೀವನ ಹಾಗೂ ಆದರ್ಶಗಳು ನನಗೆ ಮಾರ್ಗದರ್ಶನ" ಎಂದು ಹೇಳಿದರು.
ಹಾಗೆಯೇ ತಮ್ಮ ಟ್ವೀಟರ್ನಲ್ಲಿ ಬೇಲೂರು ಮಠ ಭೇಟಿಯ ಫೋಟೋಗಳನ್ನು ಹಾಕಿ ಬೇಲೂರು ಮಠದ ವಿಶೇಷ ಕ್ಷಣಗಳು ಎಂದು ಪೋಸ್ಟ್ ಮಾಡಿದ್ದಾರೆ.