ಮುಂಡಗೋಡ, ಜ.12 (Daijiworld News/PY) : "ಹೈಕಮಾಂಡ್ ಕೆಪಿಸಿಸಿ ಅಧ್ಯಕ್ಷರ ನೇಮಕವನ್ನು ಮೂರು ನಾಲ್ಕು ದಿನಗಳಲ್ಲಿ ಮಾಡಲಿದೆ" ಎಂದು ಮಾಜಿ ಸಚಿವ ಆರ್.ವಿ. ದೇಶಪಾಂಡೆ ಹೇಳಿದ್ದಾರೆ.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಮುಖ್ಯಮಂತ್ರಿಗಳು ಕ್ಷೇತ್ರಕ್ಕೆ ಬಂದ ವೇಳೆ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿದರೆ ಸಚಿವರನ್ನಾಗಿ ಮಾಡುತ್ತೇವೆ ಎಂದು ಹೇಳಿದ್ದ ಕಾರಣ ಯಲ್ಲಾಪುರ ಕ್ಷೇತ್ರದ ಮತದಾರರು ಬಿಜೆಪಿಗೆ ಅಧಿಕ ಮತ ನೀಡಿದ್ದು, ಮತದಾರರ ತೀರ್ಪನ್ನು ಗೌರವಿಸುತ್ತೇನೆ" ಎಂದರು.
"ಮುಂದೆ ಬರುವ ಗ್ರಾ.ಪಂ ಚುನಾವಣೆಯು ಪಕ್ಷಾತೀತವಾದರೂ ತಮ್ಮ ಅಭ್ಯರ್ಥಿಗಳನ್ನು ಎಲ್ಲಾ ಪಕ್ಷದವರೂ ನಿಲ್ಲಿಸುತ್ತಾರೆ, ಅದರಂತೆ ನಮ್ಮ ಪಕ್ಷದವರೂ ಕೂಡಾ ಚುನಾವಣೆಗೆ ಸ್ಪರ್ಧಿಸಲಿದ್ದಾರೆ" ಎಂದು ತಿಳಿಸಿದರು.