ಕೊಪ್ಪಳ, ಜ 12 (DaijiworldNews/SM): ರಾಜ್ಯದಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ತೀವ್ರ ಕಸರತ್ತುಗಳು ನಡೆಯುತ್ತಿವೆ. ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಆಕಾಂಕ್ಷಿಯಾಗಿದ್ದಾರೆ. ಈ ನಡುವೆ ಬಿಜೆಪಿ ನಾಯಕರ ವಿರುದ್ಧ ಸಿದ್ದರಾಮಯ್ಯ ಗುಡುಗಿದ್ದಾರೆ. ಬೇಜವಾಬ್ದಾರಿಯ ಹೇಳಿಕೆಗಳನ್ನು ನೀಡುವವರಿಗೆ ನಾನು ಉತ್ತರ ನೀಡಲ್ಲ ಎಂದಿದ್ದಾರೆ.
ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿರುವ ಅವರು, ಆಡಳಿತದಲ್ಲಿರುವ ತಪ್ಪು ಮಾಡುವಾಗ ಅದನ್ನು ಬಹಿರಂಗಗೊಳಿಸುವುದು ವಿರೋಧ ಪಕ್ಷದವರ ಕರ್ತವ್ಯವಾಗಿದೆ. ಆಡಳಿತ ಪಕ್ಷದ ತಪ್ಪು ಗಳನ್ನು ನೋಡಿ ನಾನು ಸುಮ್ಮನಿರುವುದಿಲ್ಲ ಎಂದರು.
ಮೋದಿ ಮೋದಿ ಅಂತ ಕೂಗೋದು ಆರ್ಎಸ್ಎಸ್ನವರು ಫ್ಯಾಷನ್ ಮಾಡಿಕೊಂಡಿದ್ದಾರೆ. ಅದರಿಂದ ಸಮಸ್ಯೆಗಳಿಗೆ ಉತ್ತರ ಸಿಗಲ್ಲ. ಅವರಿಗೆ ರಾಜಕೀಯ ಗಂಧ, ಗಾಳಿ ಗೊತ್ತಿಲ್ಲ. ನಾನು 5 ವರ್ಷ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದೇನೆ ಎಂದು ವಾಗ್ದಾಳಿ ನಡೆಸಿದ್ದಾರೆ.