ನವದೆಹಲಿ, ಜ 13 (Daijiworld News/MSP): ಜನವರಿ 5 ರಂದು ದೆಹಲಿಯ ಜವಹರ್ ಲಾಲ್ ವಿವಿಯ ಕ್ಯಾಂಪಸ್ನಲ್ಲಿ ನಡೆದ ಹಿಂಸಾಚಾರದ ಘಟನೆಗೆ ಸಂಬಂಧಿಸಿದ ದತ್ತಾಂಶ ಸಂರಕ್ಷಣೆಗಾಗಿ ಸಲ್ಲಿಸಿದ ಮನವಿಯಲ್ಲಿ ದೆಹಲಿ ಹೈಕೋರ್ಟ್ ಗೂಗಲ್, ವಾಟ್ಸಾಪ್ ಮತ್ತು ಆಪಲ್ಗೆ ಸೋಮವಾರ ನೋಟಿಸ್ ನೀಡಿದೆ.
ನವದೆಹಲಿ ಹೈಕೋರ್ಟ್ ನಡೆಸಿದ ವಿಚಾರಣೆಯಲ್ಲಿ, ದೆಹಲಿ ಪೊಲೀಸರ ಪರ ಹಾಜರಾದ ವಕೀಲ ರಾಹುಲ್ ಮೆಹ್ರಾ ಅವರು ನ್ಯಾಯಾಲಯದ ಮುಂದೆ ಸಲ್ಲಿಸಿದ್ದು, ಸಿಸಿಟಿವಿ ದೃಶ್ಯಾವಳಿಗಳ ಸಂರಕ್ಷಿಸಿಡುವಂತೆ ವಿಶ್ವವಿದ್ಯಾಲಯದ ಅಧಿಕಾರಿಗಳಿಗೆ ಪತ್ರಗಳನ್ನು ಬರೆಯಲಾಗಿದೆ, ಆದರೆ ವಿಶ್ವವಿದ್ಯಾಲಯವು ಇನ್ನೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇದಲ್ಲದೆ, ಹಿಂಸಾಚಾರವನ್ನು ಯೋಜಿಸಲು ಬಳಸಲಾಗಿದೆಯೆಂದು ಹೇಳಲಾದ ಎರಡು ವಾಟ್ಸಾಪ್ ಗುಂಪುಗಳ ಬಗ್ಗೆ ವಾಟ್ಸಾಪ್ನಿಂದಲೂ ಮಾಹಿತಿಯನ್ನು ಪಡೆಯಲಾಗಿದೆ ಎಂದು ಪೊಲೀಸರ ಪರ ವಕೀಲ ಮೆಹ್ರಾ ಹೇಳಿದ್ದಾರೆ.
ಹಿಂಸಾಚಾರದ ಘಟನೆಗೆ ಸಂಬಂಧಿಸಿದ ಎಲ್ಲಾ ಸಂಬಂಧಿತ ವಸ್ತುಗಳು, ದತ್ತಾಂಶಗಳು, ಮಾಹಿತಿ ಮತ್ತು ಸಾಕ್ಷ್ಯಗಳನ್ನು ಸಂರಕ್ಷಿಸಲು ನಿರ್ದೇಶನಗಳನ್ನು ಕೋರಿ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಮೂವರು ಪ್ರಾಧ್ಯಾಪಕರು ದೆಹಲಿ ಹೈಕೋರ್ಟ್ ಮುಂದೆ ಮನವಿ ಸಲ್ಲಿಸಿದ್ದರು.