ನವದೆಹಲಿ, ಜ.14 (Daijiworld News/PY) : "ದೇಶದ ಯುವ ಜನರ ಧ್ವನಿಯನ್ನು ಅಡಗಿಸಲು ಸರ್ಕಾರ ಪ್ರಯತ್ನಿಸುತ್ತಿದೆ. ಯುವಕರ ಬೇಡಿಕೆಗಳು ನ್ಯಾಯಯುತವಾಗಿದೆ ಆದರೆ, ಸರ್ಕಾರ ಅದನ್ನು ಕೇಳುತ್ತಿಲ್ಲ" ಎಂದು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ಸಿಎಎ ಹಾಗೂ ಎನ್ಆರ್ಸಿ ಕುರಿತ ಪ್ರತಿಪಕ್ಷಗಳ ಸಭೆಯ ನಂತರ ಮಾತನಾಡಿದ ಅವರು, "ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ಆರ್ಥಿಕ ವಿಚಾರಗಳಲ್ಲಿ ವಿಫಲವಾಗಿದೆ. ಇದೀಗ ಸಿಎಎ ಹಾಗೂ ಎನ್ಆರ್ಸಿ ಹಾಗೂ ಎನ್ಪಿಆರ್ ಮೂಲಕ ದೇಶವನ್ನು ವಿಚಲಿತಗೊಳಿಸಲಾಗುತ್ತಿದೆ" ಎಂದರು.
"ದೇಶದ ಆರ್ಥಿಕತೆ ಏಕೆ ಕುಗ್ಗುತ್ತಿದೆ, ಉದ್ಯೋಗ ಏಕೆ ಸೃಷ್ಟಿಯಾಗುತ್ತಿಲ್ಲ ಎಂಬ ವಿಚಾರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಯುವಕರಿಗೆ ತಿಳಿಸಬೇಕಾಗಿದೆ. ವಿದ್ಯಾರ್ಥಿಗಳ ಮುಂದೆ ನಿಲ್ಲುವ ಧೈರ್ಯ ಮೋದಿಯವರಿಗಿಲ್ಲ " ಎಂದು ಹೇಳಿದರು.