ನವದೆಹಲಿ, ಜ.14 (Daijiworld News/PY) : ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಸಂವಿಧಾನ, ಜಾತ್ಯಾತೀತತೆ ಉಲ್ಲಂಘನೆಯಾಗಿದೆ ಎಂದು ಹೇಳಿರುವ ಕೇರಳ ಸರ್ಕಾರ ಮಂಗಳವಾರ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದೆ.
ಪೌರತ್ವ ಕಾಯ್ದೆಯಲ್ಲಿ ಸಮಾನತೆಯ ಹಕ್ಕು ಸೇರಿದಂತೆ ಸಂವಿಧಾನದಲ್ಲಿರುವ ಅನೇಕ ಅಂಶಗಳನ್ನು ಉಲ್ಲಂಘಿಸಿದೆ. ಈ ಕಾಯ್ದೆಯ ಸಂವಿಧಾನದ ಮೂಲತತ್ವವಾದ ಜಾತ್ಯಾತೀತತೆಗೆ ವಿರುದ್ದವಾಗಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಸಿಎಎಯಲ್ಲಿ ಸಂವಿಧಾನದ ವಿಧಿ 14, 21 ಹಾಗೂ 25ನ್ನು ಉಲ್ಲಂಘಿಸಲಾಗಿದೆ ಎಂದು ಕೇರಳ ಸರ್ಕಾರ ತಿಳಿಸಿದೆ.
ಇತ್ತೀಚೆಗೆ ಪೌರತ್ವ ಕಾಯ್ದೆಯನ್ನು ರದ್ದುಪಡಿಸಬೇಕು ಎಂದು ಕೇರಳ ವಿಧಾನಸಭೆಯಲ್ಲಿ ಒಮ್ಮತದ ನಿರ್ಣಾಯ ಅಂಗೀಕರಿಸಲಾಗಿತ್ತು.