ನವದೆಹಲಿ, ಜ 14 (Daijiworld News/MSP): ದೇಶವನ್ನೇ ಬೆಚ್ಚಿ ಬೀಳಿಸಿದ ಅರೆವೈದ್ಯಕೀಯ ವಿದ್ಯಾರ್ಥಿನಿ ನಿರ್ಭಯಾ ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸುಪ್ರೀಂಕೋರ್ಟ್ಗೆ ಕ್ಯೂರೇಟಿವ್ ಅರ್ಜಿ(ಕಟ್ಟಕಡೆಯ ಪರಿಹಾರ) ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾ ಮಾಡಿದ್ದು, ಈ ಮೂಲಕ ಗಲ್ಲು ಖಾಯಂ ಖಾಯಂ ಆಗಿದೆ.
ಗಲ್ಲು ಶಿಕ್ಷೆಯ ದಿನಗಣನೆ ಎದುರಿಸುತ್ತಿರುವ ಅಪರಾಧಿಗಳಲ್ಲಿ ವಿನಯ್ಕುಮಾರ್ ಶರ್ಮಾ, ಮುಕೇಶ್ಸಿಂಗ್ ನೇಣು ಕುಣಿಕೆಯಿಂದ ಪಾರಾಗುವ ಕಟ್ಟಕಡೆಯ ಯತ್ನವಾಗಿ ಸುಪ್ರೀಂಕೋರ್ಟ್ಗೆ ಕ್ಯೂರೇಟಿವ್ ಅರ್ಜಿ ಸಲ್ಲಿಸಿದ್ದ. ಅರ್ಜಿಯನ್ನು ಮಾನ್ಯ ಮಾಡಿದ್ದ ಸುಪ್ರೀಂ ಇದೇ 14 ರಂದು ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ತಿಳಿಸಿತ್ತು. ಆದರೆ ಇಂದು ವಿಚಾರಣೆ ನಡೆಸಿದ ಐವರು ನ್ಯಾಯಾಧೀಶರ ಸಂವಿಧಾನಿಕ ಪೀಠ ಕ್ಯೂರೇಟಿವ್ ಅರ್ಜಿಯನ್ನು ವಜಾಗೊಳಿಸಿ ಗಲ್ಲು ಖಾಯಂಗೊಳಿಸಿದೆ
ನಿರ್ಭಯ ಪ್ರಕರಣದ ಆಪಾಧಿತರಾದ ಮುಕೇಶ್ಸಿಂಗ್ (32), ಪವನ್ಗುಪ್ತ (25), ವಿನಯ್ಕುಮಾರ್ ಶರ್ಮಾ (26) ಹಾಗೂ ಅಕ್ಷಯ್ಕುಮಾರ್ ಸಿಂಗ್ (31) ರನ್ನು ಜ.22ರಂದು ಬೆಳಗ್ಗೆ 7 ಗಂಟೆಗೆ ನೇಣಿಗೇರಿಸುವಂತೆ ದೆಹಲಿಯ ಪಟಿಯಾಲ ಕೋರ್ಟ್ ಈಗಾಗಲೇ ಡೆತ್ವಾರೆಂಟ್ ಹೊರಡಿಸಿದೆ.