ಹೊಸದಿಲ್ಲಿ, ಜ 15 (Daijiworld News/ MB) : ಈವರೆಗೂ ಸಂಸತ್ನ ಕಟ್ಟದಲ್ಲಿರುವ ಒಟ್ಟು ಐದು ಕ್ಯಾಂಟೀನ್ಗಳಲ್ಲಿ ದೊರೆಯುತ್ತಿದ್ದ ಮಾಂಸಾಹಾರ ಊಟ ಇನ್ನು ದೊರೆಯದೆ ಕೇವಲ ಸಸ್ಯಾಹಾರ ಊಟ ಮಾತ್ರ ದೊರೆಯುವ ಸಾಧ್ಯತೆಗಳು ಹೆಚ್ಚಾಗಿದೆ.
ಐಆರ್ಸಿಟಿಸಿ (ರೈಲ್ವೆ ಇಲಾಖೆಯ ಅಂಗ ಸಂಸ್ಥೆ) ಕಡೆಯಿಂದ ಹಲ್ದಿರಾಮ್ಸ್ ಅಥವಾ ಬಿಕಾನೇರ್ವಾಲಾ ಸಂಸ್ಥೆಗೆ ಈ ಕ್ಯಾಂಟೀನ್ಗಳ ಕೇಟರಿಂಗ್ ಸೇವೆಯ ಉಸ್ತುವಾರಿ ಬದಲಾಗುತ್ತಿರುವ ಹಿನ್ನಲೆ ಇನ್ನು ಸಂಸತ್ನ ಕಟ್ಟಡದಲ್ಲಿರುವ ಎಲ್ಲಾ ಕ್ಯಾಂಟೀನ್ಗಳಲ್ಲಿ ಸಸ್ಯಾಹಾರ ಮಾತ್ರ ದೊರೆಯಲಿದೆ ಎಂದು ವರದಿ ತಿಳಿಸಿದೆ.
ಸಂಸತ್ತಿನಲ್ಲಿ ಐದೂ ಕ್ಯಾಂಟೀನ್ಗಳಲ್ಲಿ ಕೇಟರಿಂಗ್ ಸೇವೆಗಾಗಿ ಕರೆಯಲಾಗಿದ್ದ ಟೆಂಡರ್ ಅಂತಿಮ ಸುತ್ತಿನಲ್ಲಿ ಸಿಹಿ ಹಾಗೂ ಕುರುಕಲು ತಿಂಡಿಗಳ ತಯಾರಕಾ ಸಂಸ್ಥೆಗಳಾದ ಹಲ್ದಿರಾಮ್ಸ್ ಹಾಗೂ ಬಿಕಾನೇರ್ವಾಲಾ ಕಂಪನಿಗಳು ಇದ್ದು ಇವೆರಡೂ ಸಸ್ಯಾಹಾರವನ್ನಷ್ಟೇ ಪೂರೈಕೆ ಮಾಡುವ ಸಂಸ್ಥೆಯಾದ್ದರಿಂದ ಇವೆರಡೂ ಸಂಸ್ಥೆಗಳಿಗೆ ಉಸ್ತುವಾರಿ ದೊರೆತರೆ ಸಂಸತ್ತಿನ ಕ್ಯಾಂಟೀನ್ಗಳಲ್ಲಿ ಸಸ್ಯಾಹಾರ ಮಾತ್ರ ಸಿಗುತ್ತದೆ ಎಂದು ವರದಿಯಾಗಿದೆ.