ದಾವನಗೆರೆ, ಜ 15 (DaijiworldNews/SM): ಅವರ್ ಲೇಡಿ ಆಫ್ ಹೆಲ್ತ್ ಮೈನರ್ ಬೆಸಿಲಿಕಾ ಘೋಷಣೆ ಮತ್ತು ಉದ್ಘಾಟನಾ ಸಮಾರಂಭ ಜನವರಿ 15 ರ ಬುಧವಾರ ನಡೆಯಿತು.
ಗೋವಾ ಮತ್ತು ದಮನ್ ಆರ್ಚ್ ಬಿಷಪ್ ಡಾ. ಫಿಲಿಪೆ ನೆರಿ ಫೆರಾವೊ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆದವು. ಬೆಂಗಳೂರಿನ ಆರ್ಚ್ಬಿಷಪ್ ಡಾ. ಪೀಟರ್ ಮಚಾದೊ, ಮಂಗಳೂರಿನ ವಿಶ್ರಾಂತ ಬಿಷಪ್ ಡಾ.ಅಲೋಶಿಯಸ್ ಪಾಲ್ ಡಿಸೋಜಾ, ಉಡುಪಿಯ ಬಿಷಪ್ ಡಾ. ಜೆರಾಲ್ಡ್ ಐಸಾಕ್ ಲೋಬೊ, ಮೈಸೂರು ಬಿಷಪ್ ಡಾ.ಕೆ.ಎ ವಿಲಿಯಂ, ಬಿಷಪ್ ಚಿಕ್ಕಮಗಳೂರು ಬಿಷಪ್ ಡಾ. ಆಂಥೋನಿ ಸ್ವಾಮಿ, ಗುಲ್ಬರ್ಗದ ಬಿಷಪ್ ಡಾ. ರಾಬರ್ಟ್ ಮಿರಾಂಡಾ, ಕಾರ್ವಾರ್ ಬಿಷಪ್ ಡಾ. ಡೆರೆಕ್ ಫೆರ್ನಾಂಡಿಸ್, ಪುಟ್ಟೂರಿನ ಬಿಷಪ್ ಡಾ. ಘೀವರ್ಗೀಸ್, ಬರೇಲಿಯ ಬಿಷಪ್ ಡಾ. ಇಗ್ನೇಷಿಯಸ್ ಡಿಸೋಜ ಮತ್ತು ಶಿವಮೊಗ್ಗ ಡಯಾಸಿಸ್ ನ ಬಿಷಪ್ ಫ್ರಾನ್ಸಿಸ್ ಸೆರಾವೊ ಸಮಾರಂಭದಲ್ಲಿ ಭಾಗವಹಿಸಿದ್ದರು.
ಉಡುಪಿಯ ಬಿಷಪ್ ಡಾ. ಜೆರಾಲ್ಡ್ ಐಸಾಕ್ ಲೋಬೊ ಅವರು ಧರ್ಮೋಪದೇಶವನ್ನು ಬೋಧಿಸಿದರು. ಚರ್ಚ್ ಅನ್ನು ಮೈನರ್ ಬೆಸಿಲಿಕಾ ಎಂದು ಏಕೆ ಕರೆಯುತ್ತಾರೆ ಎಂದು ಅವರು ಕೆಲವು ಅಂಶಗಳನ್ನು ಎತ್ತಿ ತೋರಿಸಿದರು. “ಮದರ್ ಮೇರಿ ದೇವರ ಮಾತನ್ನು ಕೇಳಿದರು. ಮತ್ತು ಅವರ ಜೀವನದುದ್ದಕ್ಕೂ ಅದನ್ನು ಅನುಸರಿಸಿದರು. ತುಂಬಾ ಕಷ್ಟಗಳನ್ನು ಅನುಭವಿಸಿ ತನ್ನ ಜೀವನದಲ್ಲಿ ಸತತ ಪ್ರಯತ್ನ ಮಾಡಬಹುದು ಎಂಬುವುದನ್ನು ತೋರಿಸಿಕೊಟ್ಟಿರುವ ಅವರು, ಎಲ್ಲರಿಗೂ ಮಾದರಿಯಾದರು. ಆದ್ದರಿಂದ ನಾವು ಅವಳ ಹೆಜ್ಜೆಗಳನ್ನು ಅನುಸರಿಸೋಣ ಎಂಬುವುದನ್ನು ಅವರು ತೋರಿಸಿಕೊಟ್ಟಿದ್ದಾರೆ” ಎಂದರು.
ಪರಮಪ್ರಸಾದದ ಆಚರಣೆಯ ನಂತರ ಸಭಾ ಕಾರ್ಯಕ್ರಮ ನಡೆಯಿತು. ಸೃಷ್ಟಿ ಕಥೆಯೊಂದಿಗೆ ಬೈಬಲ್ ಓದುವ ಮೂಲಕ ಕಾರ್ಯಕ್ರಮ ಆರಂಬಿಸಲಾಯಿತು. ಬಳಿಕ ದೇವರ ಪ್ರಾರ್ಥನೆಯಾಗಿ ಪ್ರಾರ್ಥನಾ ನೃತ್ಯ ನಡೆಯಿತು.
ಬಿಷಪ್ ಫ್ರಾನ್ಸಿಸ್ ಸೆರಾವ್ ಅವರು ಬೆಂಗಳೂರಿನ ಆರ್ಚ್ ಬಿಷಪ್ ಡಾ. ಪೀಟರ್ ಮಚಾದೊ ಅವರನ್ನು ಸ್ವಾಗತಿಸಿದರು. ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಕರ್ನಾಟಕದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು ಶುಭಕೋರಿದರು. ಹಾಗೂ ಮೈನರ್ ಬೆಸಿಲಿಕಕ್ಕೆ ಭೇಟಿಕೊಟ್ಟು ಪ್ರಾರ್ಥನೆ ಸಲ್ಲಿಸಿದರು.
ಸಮಾರಂಭದಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯುರಪ್ಪ ಹರಿಹಾರ್ನ ಮೈನರ್ ಬೆಸಿಲಿಕಾದ ಲೋಗೊ ಅನಾವರಣಗೊಳಿಸಿದರು. ಹರಿಹಾರ್ನ ಪ್ಯಾರಿಷ್ ಪಾದ್ರಿ ಫ್ರಾ. ಆಂಥೋನಿ ಪೀಟರ್ ಅವರು ಮದರ್ ಮೇರಿಯ ಅನುಭವ ಮತ್ತು ಪವಾಡವನ್ನು ವಿವರಿಸಿದರು ಮತ್ತು ಹರಿಹಾರ್ ಲೇಡಿ ಆಫ್ ಮೈನರ್ ಬೆಸಿಲಿಕಾದ ಸಂಕ್ಷಿಪ್ತ ಇತಿಹಾಸವನ್ನು ತಿಳಿಸಿದರು.
ಇನ್ನು ಹರಿಹಾರ್ ಯಾತ್ರಿಕರಿಗೆ ಭೂಮಿ ಮತ್ತು ವಸತಿ ಸೌಕರ್ಯವನ್ನು ನೀಡುವಂತೆ ಬಿಷಪ್ ಫ್ರಾನ್ಸಿಸ್ ಸೆರಾವ್ ಬಿ ಎಸ್ ಯಡಿಯುರಪ್ಪ ಅವರನ್ನು ವಿನಂತಿಸಿದರು.
ಅವರ್ ಲೇಡಿ ಆಫ್ ಗುಡ್ ಹೆಲ್ತ್ ಭಾರತದ ಪ್ರಬಲ ಪ್ರತಿಮೆಗಳಲ್ಲಿ ಒಂದಾಗಿದೆ. ಹಲವಾರು ವರ್ಷಗಳಿಂದ ದೇವಾಲಯದ ಕಡೆಗೆ ಅಗಾಧ ಯಾತ್ರಾರ್ಥಿಗಳು ಸೇರುತ್ತಿದ್ದಾರೆ. ಎಲ್ಲ ಧರ್ಮಗಳನ್ನು ಪ್ರೀತಿಸಿ ಕೋಮು ಸೌಹಾರ್ದತೆಯಿಂದ ಬದುಕಬೇಕು. ನಮ್ಮ ರಾಷ್ಟ್ರವನ್ನು ಶಾಂತಿಯುತವಾಗಬೇಕು. ಕರ್ನಾಟಕಕ್ಕೆ ಕ್ರಿಶ್ಚಿಯನ್ನರ ಕೊಡುಗೆ ಅಪಾರವಾಗಿದೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನುಡಿದರು.